×
Ad

ಚುನಾವಣಾ ಲಾಭಕ್ಕಾಗಿ ಕೀಳುಮಟ್ಟದ ರಾಜಕಾರಣ ಮಾಡುವುದನ್ನು ನಿಲ್ಲಿಸಿ: ಬಿಜೆಪಿ, ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಸ್ಟಾಲಿನ್ ತಾಕೀತು

ಡಿಎಂಕೆ ಕಾರ್ಯಕರ್ತರು ಬಿಹಾರದ ಕೂಲಿಕಾರ್ಮಿಕರಿಗೆ ಕಿರುಕುಳ ನೀಡಿದ್ದರು ಎಂಬ ಪ್ರಧಾನಿ ಹೇಳಿಕೆಗೆ ಖಂಡನೆ

Update: 2025-10-31 14:45 IST

 ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (Photo: PTI)

ಚೆನ್ನೈ: “ಡಿಎಂಕೆ ಕಾರ್ಯಕರ್ತರು ಬಿಹಾರದ ಕೂಲಿಕಾರ್ಮಿಕರಿಗೆ ಕಿರುಕುಳ ನೀಡಿದ್ದರು” ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಖಂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, “ಚುನಾವಣಾ ರಾಜ್ಯಗಳಲ್ಲಿ ತಮಿಳರನ್ನು ಗುರಿಯಾಗಿಸಿಕೊಂಡು, ಅವರ ವಿರುದ್ಧ ಹಗೆತನ ಪ್ರದರ್ಶಿಸುವ ಕೀಳುಮಟ್ಟದ ರಾಜಕಾರಣ ನಿಲ್ಲಿಸಿ” ಎಂದು ತಾಕೀತು ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಭಾಷಣದ ವಿಡಿಯೊ ದೃಶ್ಯವೊಂದನ್ನು ಪೋಸ್ಟ್ ಮಾಡಿರುವ ಎಂ.ಕೆ.ಸ್ಟಾಲಿನ್, “ಚುನಾವಣಾ ರಾಜಕಾರಣದ ಲಾಭಕ್ಕಾಗಿ ತಮಿಳರನ್ನು ಗುರಿಯಾಗಿಸಿಕೊಂಡು ವಿಷಪೂರಿತ ಹೇಳಿಕೆ ನೀಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಒಡಿಶಾ ಇರಲಿ ಅಥವಾ ಬಿಹಾರ ಆಗಲಿ, ಚುನಾವಣಾ ರಾಜ್ಯಗಳಲ್ಲಿ ಚುನಾವಣಾ ರಾಜಕಾರಣ ಮಾಡುವ ಸಲುವಾಗಿ ತಮಿಳರ ವಿರುದ್ಧ ಹಗೆತನ ಪ್ರದರ್ಶಿಸಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

ಎಂ.ಕೆ.ಸ್ಟಾಲಿನ್ ಹಂಚಿಕೊಂಡಿರುವ 10 ಸೆಕೆಂಡ್ ಗಳ ವಿಡಿಯೊ ತುಣುಕಿನಲ್ಲಿ ಡಿಎಂಕೆಗೆ ಸಂಬಂಧಿಸಿದ ವ್ಯಕ್ತಿಗಳು ಕಠಿಣ ಪರಿಶ್ರಮಿ ಜೀವಿಗಳಾದ ಬಿಹಾರ ಕೂಲಿಕಾರ್ಮಿಕರಿಗೆ ಕಿರುಕುಳ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸುತ್ತಿರುವುದನ್ನು ನೋಡಬಹುದಾಗಿದೆ.

ಆದರೆ, ಈ ವಿಡಿಯೊದ ದಿನಾಂಕ, ಸಮಯ ಮತ್ತು ಸ್ಥಳ ಇನ್ನೂ ದೃಢಪಟ್ಟಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News