×
Ad

ಕಾನೂನು ಹೋರಾಟಕ್ಕೆ ಒಗ್ಗಟ್ಟಾಗಬೇಕು: ಬಿಜೆಪಿಯೇತರ ರಾಜ್ಯಗಳಿಗೆ ಪತ್ರ ಬರೆದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್

Update: 2025-05-18 17:03 IST

ಎಂ.ಕೆ. ಸ್ಟಾಲಿನ್ (PTI)

ಹೊಸದಿಲ್ಲಿ: ಮಸೂದೆಯನ್ನು ಅನುಮೋದನೆಗೆ ಗಡುವು ನಿಗದಿಪಡಿಸಿದ ಸುಪ್ರೀಂ ಕೋರ್ಟ್ ಮುಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು 14 ಪ್ರಶ್ನೆಗಳನ್ನಿಟ್ಟು ಅಭಿಪ್ರಾಯವನ್ನು ಕೋರಿದ್ದರು. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರವಿವಾರ ಬಿಜೆಪಿ ಆಡಳಿತ ರಹಿತ ರಾಜ್ಯಗಳಿಗೆ ಪತ್ರ ಬರೆದು ಕೇಂದ್ರದ ತಂತ್ರದ ವಿರುದ್ಧ ಒಗ್ಗೂಡುವಂತೆ ಆಗ್ರಹಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಸಲಹೆ ನೀಡಿದೆ ಎಂದು ಸ್ಟಾಲಿನ್ ಆರೋಪಿಸಿದರು. ಸಂವಿಧಾನದ ಮೂಲ ರಚನೆಯನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಐಕ್ಯರಂಗವನ್ನು ಪ್ರಸ್ತುತಪಡಿಸಲು ಕರೆ ನೀಡಿದರು.

"ನಿಮಗೆ ತಿಳಿದಿರುವಂತೆ, ಭಾರತದ ರಾಷ್ಟ್ರಪತಿಗಳು, ಕೇಂದ್ರ ಸರಕಾರದ ಸಲಹೆಯ ಮೇರೆಗೆ 2025ರ ಮೇ 13ರಂದು ಭಾರತದ ಸಂವಿಧಾನದ 143ನೇ ವಿಧಿಯ ಅಡಿಯಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಕೋರಿದ್ದಾರೆ. ಯಾವುದೇ ರಾಜ್ಯ ಅಥವಾ ತೀರ್ಪನ್ನು ನಿರ್ದಿಷ್ಟವಾಗಿ ಉಲ್ಲೇಖಿಸದಿದ್ದರೂ, ತಮಿಳುನಾಡು ರಾಜ್ಯ vs ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸುವುದು ಇದರ ಉದ್ದೇಶವಾಗಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಕೇಸರಿ ಪಕ್ಷದ ʼದುಷ್ಟ ಉದ್ದೇಶʼ ಎಂದು ಕರೆದ ಸ್ಟಾಲಿನ್, ಸ್ಪಷ್ಟವಾಗಿ ಬಿಜೆಪಿ ಈ ತೀರ್ಪನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಬಿಜೆಪಿ ಸರಕಾರದ ತಂತ್ರದ ಭಾಗವಾಗಿ ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಅಭಿಪ್ರಾಯ ಪಡೆಯುವಂತೆ ಸಲಹೆ ನೀಡಿದೆ.

ಈ ಮಹತ್ವದ ವಿಷಯದಲ್ಲಿ ನಿಮ್ಮ ತಕ್ಷಣದ ಮತ್ತು ಮಧ್ಯಪ್ರವೇಶಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಪತ್ರದಲ್ಲಿ ಹೇಳಿದರು.

ರಾಷ್ಟ್ರಪತಿ ಮತ್ತು ರಾಜ್ಯಪಾಲರ ಕ್ರಮಗಳಿಗೆ ಗಡುವು ನಿಗದಿಪಡಿಸಿದ ತೀರ್ಪಿನ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಸುಪ್ರೀಂ ಕೋರ್ಟ್‌ಗೆ 14 ಪ್ರಶ್ನೆಗಳನ್ನು ಸಲ್ಲಿಸಿ ಅಭಿಪ್ರಾಯವನ್ನು ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News