×
Ad

ನೂತನ ರಾಜಕೀಯ ಪಕ್ಷ ಘೋಷಿಸಿದ ತಮಿಳು ಸೂಪರ್ ಸ್ಟಾರ್ ವಿಜಯ್

Update: 2024-02-02 14:34 IST

ನಟ ವಿಜಯ್ (Photo: X)

ಚೆನ್ನೈ/ಹೊಸದಿಲ್ಲಿ: ನಟ ವಿಜಯ್ ʼತಮಿಳ ವೆಟ್ರಿ ಕಳಗಂʼ ಎಂಬ ನೂತನ ರಾಜಕೀಯ ಪಕ್ಷವನ್ನು ಘೋಷಿಸಿದ್ದು, ಈ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ʼತಮಿಳ ವೆಟ್ರಿ ಕಳಗಂʼ ನಾಯಕರು ತಮ್ಮನ್ನು ಪಕ್ಷದ ಮುಖ್ಯಸ್ಥನನ್ನಾಗಿ ನೇಮಕ ಮಾಡಿದ ನಂತರ ವಿಜಯ್ ಆ ಪಕ್ಷಕ್ಕೆ ತಮಿಳುನಾಡಿನಲ್ಲಿ ಚಾಲನೆ ನೀಡಿದ್ದಾರೆ. 2026ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನವೇ ಅವರು ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ndtv.com ವರದಿ ಮಾಡಿದೆ.

ತಮ್ಮ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ತಮಿಳ ವೆಟ್ರಿ ಕಳಗಂ ಇನ್ನಿತರ ಯಾವುದೇ ಪಕ್ಷಗಳನ್ನು ಬೆಂಬಲಿಸುವುದಿಲ್ಲ ಎಂದು ಇತ್ತೀಚೆಗೆ ನಡೆದ ಸಾಮಾನ್ಯ ಮಂಡಳಿ ಹಾಗೂ ಕಾರ್ಯಕಾರಿ ಮಂಡಳಿ ಸಭೆಗಳಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

“ನಾನು ಈಗಾಗಲೇ ತೊಡಗಿಸಿಕೊಂಡಿರುವ ಚಲನಚಿತ್ರಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದು, ಆ ಮೂಲಕ ಪಕ್ಷದ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸಂಪೂರ್ಣವಾಗಿ ಸಾಮಾಜಿಕ ಸೇವೆಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ನಾನು ಇದನ್ನು ತಮಿಳುನಾಡು ಜನರಿಗೆ ಸಲ್ಲಿಸುತ್ತಿರುವ ಕೃತಜ್ಞತೆ ಎಂದು ಭಾವಿಸಿದ್ದೇನೆ” ಎಂದು ವಿಜಯ್ ಹೇಳಿದ್ದಾರೆ.

ಈ ಪ್ರಕಟಣೆಯನ್ನು ವಿಜಯ್ ಅಭಿಮಾನಿಗಳು ಸಂಭ್ರಮಾಚರಣೆಯೊಂದಿಗೆ ಸ್ವಾಗತಿಸಿದ್ದು, ತಮಿಳುನಾಡು ರಾಜಕಾರಣಕ್ಕೆ ಹಿರಿಯ ನಟರಾದ ಎಂ.ಜಿ.ರಾಮಚಂದ್ರನ್ ಹಾಗೂ ಜೆ.ಜಯಲಲಿತಾರಂಥವರು ಪದಾರ್ಪಣೆ ಮಾಡಿದ ನಂತರ ವಿಜಯ್ ಕೂಡಾ ಅದೇ ಹಾದಿ ಹಿಡಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News