×
Ad

"ಟಿಡಿಪಿ ದ್ವೇಷ ರಾಜಕಾರಣ ಮಾಡುತ್ತಿದೆ": ಪಕ್ಷದ ಕೇಂದ್ರ ಕಚೇರಿ ನೆಲಸಮಗೊಳಿಸಿದ್ದಕ್ಕೆ YSRCP ಆಕ್ರೋಶ

Update: 2024-06-22 11:45 IST

 PC : X/@ANI

ಅಮರಾವತಿ: ತಾಡೆಪಲ್ಲಿಯಲ್ಲಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯನ್ನು ಶನಿವಾರ ನೆಲಸಮಗೊಳಿಸಲಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ನೆಲಸಮದ ಕುರಿತು ಪ್ರತಿಕ್ರಿಯಿಸಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷವು, “ಟಿಡಿಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಆಂಧ್ರಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾಥಮಿಕ ಕ್ರಮವನ್ನು ಪ್ರಶ್ನಿರಸಿ ಹಿಂದಿನ ದಿನ ನಮ್ಮ ಪಕ್ಷವು ಹೈಕೋರ್ಟ್ ಮೊರೆ ಹೋಗಿದ್ದರೂ, ನೆಲಸಮ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ನ್ಯಾಯಾಲಯವು ನೆಲಸಮ ಕಾರ್ಯಾಚರಣೆಯನ್ನು ತಡೆ ಹಿಡಿಯುವಂತೆ ಆದೇಶಿಸಿತ್ತು” ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News