×
Ad

ತೆಲಂಗಾಣ | ಚೂರಿಯಿಂದ ಇರಿದು ಕಾಂಗ್ರೆಸ್ ನಾಯಕನ ಹತ್ಯೆ

Update: 2024-10-22 19:17 IST

ಸಾಂದರ್ಭಿಕ ಚಿತ್ರ

ಕರೀಮ್‌ನಗರ : ತೆಲಂಗಾಣದ ಜಗ್ತಿಯಾಲ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಆಡಳಿತಾರೂಢ ಕಾಂಗ್ರೆಸ್ ನಾಯಕರೋರ್ವರನ್ನು ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ.

ಮಾರು ಗಂಗಾರೆಡ್ಡಿ(56) ಕೊಲೆಯಾಗಿರುವ ಕಾಂಗ್ರೆಸ್ ನಾಯಕ. ಮಂಗಳವಾರ ಬೆಳಗ್ಗೆ ಅವರು ಬೈಕ್‌ನಲ್ಲಿ ಜಗ್ತಿಯಾಲ ಜಿಲ್ಲೆಯ ಜಾಬಿತಪುರ ಗ್ರಾಮಕ್ಕೆ ತೆರಳುತ್ತಿದ್ದಾಗ ಕಾರೊಂದು ಢಿಕ್ಕಿ ಹೊಡೆದಿತ್ತು. ಕಾರಿನಿಂದ ಇಳಿದ ವ್ಯಕ್ತಿ ರಸ್ತೆಗೆ ಬಿದ್ದಿದ್ದ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೋಲಿಸರು ತಿಳಿಸಿದರು.

ಗಂಗಾರೆಡ್ಡಿಯವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಗ್ತಿಯಾಲ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಮೃತ ಗಂಗಾರೆಡ್ಡಿ ಎಂಎಲ್‌ಸಿ ಜೀವನ ರೆಡ್ಡಿಯವರ ನಿಕಟವರ್ತಿಯಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದರು.

ಆರೋಪಿ ಮತ್ತು ಗಂಗಾರೆಡ್ಡಿ ನಡುವಿನ ಹಳೆಯ ದ್ವೇಷ ಕೊಲೆಗೆ ಕಾರಣವಾಗಿರಬಹುದು. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೋಲಿಸರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News