×
Ad

ತೆಲಂಗಾಣದಲ್ಲಿ ಒಂದೇ ದಿನ 65 ಸೆಂಟಿಮೀಟರ್ ಮಳೆ: 14 ಮಂದಿ ಮೃತ್ಯು

Update: 2023-07-29 07:53 IST

ಸಾಂದರ್ಭಿಕ ಚಿತ್ರ Photo:PTI

ಹೈದರಾಬಾದ್: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ದಾಖಲೆ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿಯಿಂದ 14 ಮಂದಿ ಜಲಸಮಾಧಿಯಾಗಿದ್ದಾರೆ. ಇದರೊಂದಿಗೆ ಈ ವಾರ ಮಳೆ ಸಂಬಂಧಿ ಅನಾಹುತಗಳಿಗೆ ಬಲಿಯಾದವರ ಸಂಖ್ಯೆ 23ಕ್ಕೇರಿದೆ.

ಪ್ರಸಕ್ತ ಮುಂಗಾರಿನಲ್ಲಿ ದೇಶದಲ್ಲೇ ಒಂದು ದಿನ ಗರಿಷ್ಠ ಮಳೆ ಬಿದ್ದ ದಾಖಲೆಗೆ ಮುಗುಲು ಜಿಲ್ಲೆ ಸೇರಿದೆ. ಗುರುವಾರ ಮುಕ್ತಾಯಗೊಂಡ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 649.8 ಮಿಲಿಮೀಟರ್ ಮಳೆ ಬಿದ್ದಿದೆ. "ತೆಲಂಗಾಣ ದಾಖಲೆ ಮುರಿಯುವ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ. ಮುಗುಲು ಜಿಲ್ಲೆಯಲ್ಲಿ ದಾಖಲೆ 64.9 ಮಿಲಿಮೀಟರ್ ಮಳೆ ಬಿದ್ದಿದೆ. ಈ ಮುಂಗಾರಿನಲ್ಲಿ ಇಂಥ ತೀವ್ರ ಪ್ರಮಾಣದ ಮಳೆ ಬಿದ್ದಿರುವುದು ಇದೇ ಮೊದಲು" ಎಂದು ಭಾರತದ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.

ಇದಕ್ಕೂ ಮುನ್ನ ಗುಜರತ್‍ಮ ಗೀರ್‍ಸೋಮನಾಥ್ (54 ಸೆಂಟಿಮೀಟರ್) ಮಯತ್ತು ಮಹಾರಾಷ್ಟ್ರದ ಮಾಥೆ ರಾಣ್ (40 ಸೆಂಟಿಮೀಟರ್)ನಲ್ಲಿ ಒಂದೇ ದಿನ ಅಧಿಕ ಮಳೆಯಾದದ್ದು ದಾಖಲೆಯಾಗಿತ್ತು.

ಮುಲುಗು ಜಿಲ್ಲೆಯಲ್ಲಿ ಸಂಭವಿಸಿದ 14 ಸಾವಿನ ಪೈಕಿ ಎಂಟು ಮಂದಿ ಕೊಂಡೈ ಗ್ರಾಮದವರು. ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಜಂಪನ್ನ ವಾಗು ತೊರೆಯ ಪ್ರವಾಹದಲ್ಲಿ ಸಂತ್ರಸ್ತರು ಕೊಚ್ಚಿಕೊಂಡು ಹೋದವರ ಮೃತದೇಹಗಳು ಶುಕ್ರವಾರ ಪತ್ತೆಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News