×
Ad

ತನ್ನ ಆರೋಗ್ಯ ಸಮಸ್ಯೆಯನ್ನು ಮುಚ್ಚಿಟ್ಟಿದ್ದ ಪತಿಯ ವಿರುದ್ಧ ದೂರು ದಾಖಲಿಸಿದ ಮಹಿಳೆ

Update: 2024-01-29 13:52 IST

ಥಾಣೆ: ತನ್ನ ಆರೋಗ್ಯ ಸಮಸ್ಯೆಯನ್ನು ಮುಚ್ಚಿಟ್ಟಿದ್ದ ತನ್ನ ಪತಿಯ ವಿರುದ್ಧ ಮಹಾರಾಷ್ಟ್ರದ ಥಾಣೆ ಜಿಲ್ಲೆಯ 32 ವರ್ಷದ ಮಹಿಳೆಯೊಬ್ಬರು ವಂಚನೆ ಹಾಗೂ ಕಿರುಕುಳದ ದೂರನ್ನು ನೀಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ವರ್ಷ ಜೂನ್ 8ರಂದು ಈ ಇಬ್ಬರು ದಂಪತಿಗಳಿಗೆ ನಾಸಿಕ್ ನಲ್ಲಿ ವಿವಾಹವಾಗಿತ್ತು.

ತನಗೆ ವಿವಾಹವಾದ ಕೆಲವು ಸಮಯದ ನಂತರ, ತಾನು ತನ್ನ 40 ವರ್ಷದ ಪತಿಯ ವೈದ್ಯಕೀಯ ದಾಖಲೆಗಳನ್ನು ಪರೀಕ್ಷಿಸಿದಾಗ, ಅವರು ಷಂಡತನಕ್ಕೆ ಚಿಕಿತ್ಸೆ ಪಡೆಯುತ್ತಿರುವ ಸಂಗತಿ ಬಹಿರಂಗಗೊಂಡಿತು ಎಂದು ಮಹಿಳೆಯು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಖಡಕ್ಪಡ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನ ಪತಿಯೊಂದಿಗೆ ಈ ಕುರಿತು ವಾಗ್ವಾದ ನಡೆಸಿದಾಗ, ತಾನು ಮದುವೆಗೂ ಮುಂಚೆ ಈ ವಿಷಯವನ್ನು ಮುಚ್ಚಿಟ್ಟಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಆ ಮಹಿಳೆಯು ತನ್ನ ದೂರಿನಲ್ಲಿ ಹೇಳಿದ್ದಾರೆ.

ಮಹಿಳೆಯ ದೂರನ್ನು ಆಧರಿಸಿ, ಆಕೆಯ ಪತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಹಾಗೂ 498ಎ (ಪತಿ ಅಥವಾ ಪತಿಯ ಸಂಬಂಧಿಕರು ಮಹಿಳೆಗೆ ಕಿರುಕುಳ ನೀಡುವುದು) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದೂ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News