×
Ad

ಬಜೆಟ್ ನಲ್ಲಿ ಆಂಧ್ರಪ್ರದೇಶಕ್ಕೆ 15,000 ಕೋಟಿ ರೂ.ಪ್ಯಾಕೇಜ್ ಘೋಷಿಸಿದ್ದಕ್ಕೆ ಕೇಂದ್ರಕ್ಕೆ ಧನ್ಯವಾದ ಹೇಳಿದ ಮಿತ್ರಪಕ್ಷ ಟಿಡಿಪಿ

Update: 2024-07-23 20:45 IST

PC : PTI 

ಹೊಸದಿಲ್ಲಿ: ಆಂಧ್ರಪ್ರದೇಶದ ರಾಜಧಾನಿ ಅಮರಾವತಿ,ರಾಜ್ಯದ ರೈತರ ಪಾಲಿಗೆ ಜೀವನಾಡಿಯಾಗಿರುವ ಪೋಲಾವರಂ ಯೋಜನೆಗಳನ್ನು ಪೂರ್ಣಗೊಳಿಸಲು ಬೆಂಬಲವನ್ನು ಘೋಷಿಸಿದ್ದಕ್ಕಾಗಿ ಟಿಡಿಪಿ ನಾಯಕ ನಾರಾ ಲೋಕೇಶ್ ಅವರು ಕೇಂದ್ರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

‘ಬಜೆಟ್ನಲ್ಲಿ 15,000 ಕೋ.ರೂ.ಗಳನ್ನು ಹಂಚಿಕೆ ಮಾಡುವ ಮೂಲಕ ಆಂಧ್ರಪ್ರದೇಶದ ಪುನರ್ನಿರ್ಮಾಣಕ್ಕೆ ಬದ್ಧವಾಗಿರುವುದಕ್ಕಾಗಿ ರಾಜ್ಯದ ಜನತೆಯ ಪರವಾಗಿ ನಾವು ಎನ್ಡಿಎ ಸರಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ’ ಎಂದು ಆಂಧ್ರಪ್ರದೇಶದ ಮಾನವ ಸಂಪನ್ಮೂಲಗಳ ಸಚಿವರೂ ಆಗಿರುವ ಲೋಕೇಶ್ ಮಂಗಳವಾರ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.

ಆಂಧ್ರಪ್ರದೇಶ ಪುನರ್ರಚನೆ ಕಾಯ್ದೆಯಲ್ಲಿನ ಬದ್ಧತೆಗಳನ್ನು ಈಡೇರಿಸಲು ಕೇಂದ್ರವು ಪ್ರಯತ್ನಗಳನ್ನು ಮಾಡಿದೆ ಎಂದು ಬಜೆಟ್ ಭಾಷಣದಲ್ಲಿ ಹೇಳಿರುವ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,‘ನಾವು ಬಹುಪಕ್ಷೀಯ ಏಜೆನ್ಸಿಗಳ ಮೂಲಕ ವಿಶೇಷ ಹಣಕಾಸು ಬೆಂಬಲವನ್ನು ಒದಗಿಸುತ್ತೇವೆ. ಭವಿಷ್ಯದ ವರ್ಷಗಳಲ್ಲಿ ಹೆಚ್ಚುವರಿ ಮೊತ್ತಗಳೊಂದಿಗೆ ಪ್ರಸ್ತುತ ವಿತ್ತವರ್ಷದಲ್ಲಿ 15,000 ಕೋ.ರೂ.ಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.

ದೇಶದಲ್ಲಿ ಆಹಾರ ಭದ್ರತೆಗೆ ಪೂರಕವಾಗುವ ಆಂಧ್ರಪ್ರದೇಶದ ಪ್ರಮುಖ ಪೋಲಾವರಂ ನೀರಾವರಿ ಯೋಜನೆಗೆ ಹಣಕಾಸು ನೆರವು ಒದಗಿಸಲು ಮತ್ತು ಅದನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೇಂದ್ರ ಸರಕಾರವು ಬದ್ಧವಾಗಿದೆ ಎಂದೂ ಅವರು ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News