×
Ad

‘ದ ಬಂಗಾಳ ಫೈಲ್ಸ್’ ಚಲನಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಪೊಲೀಸ್ ತಡೆ

Update: 2025-08-16 20:26 IST

ದ ಬಂಗಾಳ ಫೈಲ್ಸ್ 

ಕೋಲ್ಕತಾ, ಆ. 16: 1946ರ ಕೋಲ್ಕತ್ತಾ ಗಲಭೆಗಳನ್ನು ಆಧಾರಿಸಿದ ವಿವಾದಾತ್ಮಕ ಚಲನಚಿತ್ರ ‘ದ ಬಂಗಾಳ ಫೈಲ್ಸ್’ನ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕೋಲ್ಕತ್ತಾ ಪೊಲೀಸರು ಶನಿವಾರ ತಡೆ ಒಡ್ಡಿದ್ದಾರೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆರೋಪಿಸಿದ್ದಾರೆ.

ನಗರದ ಫೈವ್ ಸ್ಟಾರ್ ಹೋಟೇಲ್‌ ನಲ್ಲಿ ಶನಿವಾರ ಅಪರಾಹ್ನ ಈ ಚಲನಚಿತ್ರದ ಟೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಈ ವಿಷಯದ ಕುರಿತು ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

ಸೆನ್ಸಾರ್ ಮಂಡಳಿ ಚಲನಚಿತ್ರಕ್ಕೆ ಅನುಮತಿ ನೀಡಿದೆ ಹಾಗೂ ಕೋಲ್ಕತ್ತಾ ಉಚ್ಚ ನ್ಯಾಯಾಲಯ ಅದರ ಮೇಲಿನ ನಿಷೇಧಕ್ಕೆ ತಡೆ ನೀಡಿದೆ. ಆದುದರಿಂದ ಈ ನಡೆ ಜನರ ಪ್ರಜಾಸತ್ತಾತ್ಮಕ ಹಕ್ಕಿನ ಮೇಲಿನ ಉಲ್ಲಂಘನೆ ಎಂದು ಅಗ್ನಿ ಹೋತ್ರಿ ಆರೋಪಿಸಿದ್ದಾರೆ.

‘‘ದ ಬಂಗಾಲ ಫೈಲ್ಸ್’’ 1940ರ ಸಂದರ್ಭ ಅವಿಭಜಿತ ಬಂಗಾಳದಲ್ಲಿ ನಡೆದ ಕೋಮ ಹಿಂಸಾಚಾರದ ಕುರಿತು ಬೆಳಕು ಚೆಲ್ಲುತ್ತದೆ.

ಈ ಚಲನಚಿತ್ರ ಸೆಪ್ಟಂಬರ್ 5ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News