×
Ad

ಎಂಟು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶ ಸಂಸದನ ಮೃತದೇಹ ಕೋಲ್ಕತ್ತಾದಲ್ಲಿ ಪತ್ತೆ

Update: 2024-05-22 14:28 IST

ಅನ್ವರುಲ್ ಅಝೀಮ್ ಅನಾರ್ | PC : X

ಕೋಲ್ಕತ್ತಾ: ಎಂಟು ದಿನಗಳ ಹಿಂದೆ ಭಾರತದಲ್ಲಿ ನಾಪತ್ತೆಯಾಗಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಝೀಮ್ ಅನಾರ್ ಅವರ ಛಿದ್ರಗೊಂಡ ಮೃತದೇಹವನ್ನು ಕೋಲ್ಕತ್ತಾದ ಝೆನೈದಾ-4 ಕ್ಷೇತ್ರದಲ್ಲಿ ಕೋಲ್ಕತ್ತಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಹತ್ಯೆಯು ಪೂರ್ವನಿಯೋಜಿತ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಅನಾರ್ ಅವರ ದೇಹವನ್ನು ತುಂಡುಗಳನ್ನಾಗಿ ಕತ್ತರಿಸಲಾಗಿದ್ದು, ಅವುಗಳ ಪೈಕಿ ಕೆಲವನ್ನು ಕೋಲ್ಕತ್ತಾದ ನ್ಯೂ ಟೌನ್ ನಲ್ಲಿರುವ ಸಂಜೀವ ಗಾರ್ಡನ್ ನಲ್ಲಿನ ಅಪಾರ್ಟ್ ಮೆಂಟ್ ಒಂದರಿಂದ ವಶಪಡಿಸಿಕೊಳ್ಳಲಾಗಿದೆ.

ಅನಾರ್ ಮೃತದೇಹ ಪತ್ತೆಯಾಗಿರುವ ಅಪಾರ್ಟ್ ಮೆಂಟ್, ಅಬಕಾರಿ ಸುಂಕ ಇಲಾಖೆಯ ಅಧಿಕಾರಿಯೊಬ್ಬರಿಗೆ ಸೇರಿದೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಾಂಗ್ಲಾದೇಶ ಪೊಲೀಸ್ ಮಹಾನಿರೀಕ್ಷಕರು, ನಾವು ಕೋಲ್ಕತ್ತಾ ಪೊಲೀಸರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ. ನಾವು ಇನ್ನಷ್ಟೆ ಹತ್ಯೆಯ ಕುರಿತು ನಿರ್ದಿಷ್ಟ ಮಾಹಿತಿಯನ್ನು ಸ್ವೀಕರಿಸಬೇಕಿದೆ ಎಂದು ಹೇಳಿದ್ದಾರೆ ಎಂದು The Business Standard ಪತ್ರಿಕೆ ವರದಿ ಮಾಡಿದೆ.

ಈ ಹತ್ಯೆಯಲ್ಲಿ ಚಿನ್ನದ ಕಳ್ಳ ಸಾಗಣೆಯ ಪಾತ್ರವೇನಾದರೂ ಇದೆಯೆ ಅಥವಾ ಇಲ್ಲವೆ ಎಂಬ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ ಎಂದೂ ಬಾಂಗ್ಲಾದೇಶ ಪೊಲೀಸ್ ಮಹಾನಿರೀಕ್ಷಕರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News