×
Ad

ಸ್ವಯಂ ನಿವೃತ್ತಿ ಪಡೆಯಲಿರುವ ಆರ್ಯನ್‌ ಖಾನ್‌ಗೆ ಕ್ಲೀನ್‌ ಚಿಟ್‌ ನೀಡಿದ್ದ ಎನ್‌ಸಿಬಿ ಎಸ್‌ಐಟಿ ಮುಖ್ಯಸ್ಥ

Update: 2024-04-19 16:31 IST

ಆರ್ಯನ್‌ ಖಾನ್‌ , ಸಂಜಯ್‌ ಸಿಂಗ್‌ | PC : PTI 

ಹೊಸದಿಲ್ಲಿ: ಕೊರ್ಡೇಲಿಯಾ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಅವರಿಗೆ ಕ್ಲೀನ್‌ ಚಿಟ್‌ ನೀಡಿದ್ದ ನಾರ್ಕಾಟಿಕ್ಸ್‌ ಕಂಟ್ರೋಲ್‌ ಬ್ಯುರೋದ ಎಸ್‌ಐಟಿಯ ಮುಖ್ಯಸ್ಥರಾಗಿದ್ದ ಐಪಿಎಸ್‌ ಅಧಿಕಾರಿ ಸಂಜಯ್‌ ಸಿಂಗ್‌ ಅವರಿಗೆ ತಮ್ಮ ಸೇವಾವಧಿ ಪೂರ್ಣಗೊಳ್ಳುವ ಒಂದು ವರ್ಷ ಮುಂಚಿತವಾಗಿಯೇ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಅನುಮತಿಸಲಾಗಿದೆ.

ಒಡಿಶಾ ಕೇಡರ್‌ನ 1996 ಬ್ಯಾಚಿನ ಐಪಿಎಸ್‌ ಅಧಿಕಾರಿಯಾಗಿರುವ ಸಿಂಗ್‌ ಜನವರಿ 2021 ರಿಂದ ಎನ್‌ಸಿಬಿಯ ಉಪ ಮಹಾನಿರ್ದೇಶಕರಾಗಿದ್ದಾರೆ.

“ಫೆಬ್ರವರಿ 29ರಂದು ವಿಆರ್‌ಎಸ್‌ ಕುರಿತು ಮನವಿ ಸಲ್ಲಿಸಿ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದೆ. ಆದರೆ ಈ ಅನುಮತಿಯನ್ನು ಒಡಿಶಾ ಸರ್ಕಾರ ನೀಡಬೇಕಿದೆ ಎಂದು ನನಗೆ ತಿಳಿಸಲಾಯಿತು. ಈಗ ನನ್ನ ವಿನಂತಿಗೆ ಅನುಮೋದನೆ ದೊರಕಿದೆ. ಎಪ್ರಿಲ್‌ 30 ಸೇವೆಯ ಕೊನೆಯ ದಿನವಾಗಲಿದೆ,” ಎಂದು ಅವರು ಹೇಳಿದ್ದಾರೆ.

ಸಿಂಗ್‌ ಈ ಹಿಂದೆ ಒಡಿಶಾ ಪೊಲೀಸರ ಡ್ರಗ್‌ ಟಾಸ್ಕ್‌ ಫೋರ್ಸ್‌ ಮುಖ್ಯಸ್ಥರಾಗಿದ್ದರು ಹಾಗೂ ಎಡಿಜಿ ಆಗಿಯೂ ಕಾರ್ಯನಿರ್ವಹಿಸಿದ್ದರು. ಸಿಬಿಐಯಲ್ಲೂ 2008ರಿಂದ 2015 ತನಕ ಸೇವೆ ಸಲ್ಲಿಸಿದ್ದ ಅವರು ಡಿಐಜಿ ಹುದ್ದೆಯಲ್ಲಿದ್ದು ಹಲವು ಪ್ರಮುಖ ಪ್ರಕರಣಗಳನ್ನು ನಿಭಾಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News