×
Ad

ಯೋಧರು, ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಿದ ಶ್ವಾನ ದಳಕ್ಕೆ ಬೀಳ್ಕೊಡುಗೆ ನೀಡಿದ ವಯನಾಡ್ ಜನತೆ

Update: 2024-08-09 17:16 IST

PC : PTI 

ವಯನಾಡ್: ಭೀಕರ ಭೂಕುಸಿತದಿಂದ ತತ್ತರಿಸಿ ಹೋಗಿರುವ ವಯನಾಡ್ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಭಾರತೀಯ ಸೇನಾ ಸಿಬ್ಬಂದಿಗಳಿಗೆ ವಯನಾಡ್ ಜನತೆ ಹೃತ್ಪೂರ್ವಕ ಬೀಳ್ಕೊಡುಗೆ ನೀಡಿದರು.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕೊಚ್ಚಿ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿಯು, “ಭೂಕುಸಿತ ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟ ನಮ್ಮ ವೀರ ಯೋಧರಿಗೆ ನಾವು ಭಾರಿ ಆಭಾರಿಗಳಾಗಿರುತ್ತೇವೆ. ನಿಮ್ಮ ಧೈರ್ಯ ಹಾಗೂ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ” ಎಂದು ಅಪಾರ ಶೌರ್ಯ ಹಾಗೂ ನಿಸ್ವಾರ್ಥತೆಯನ್ನು ಪ್ರದರ್ಶಿಸಿದ ಭಾರತೀಯ ಸೇನಾ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತೀಯ ಸೇನೆಯ ಯೋಧರು ನಗರವನ್ನು ತೊರೆಯಲು ಮುಂದಾದಾಗ, ಸ್ಥಳೀಯರು ‘ಭಾರತ್ ಮಾತಾ ಕಿ ಜೈ’ ಹಾಗೂ ‘ಇಂಡಿಯನ್ ಆರ್ಮಿ ಕಿ ಜೈ’ ಎಂದು ಘೋಷಣೆಗಳನ್ನು ಕೂಗುತ್ತಿರುವುದು ವಿಡಿಯೊವೊಂದರಲ್ಲಿ ಸೆರೆಯಾಗಿದೆ. ಯೋಧರೊಂದಿಗೆ ಶ್ವಾನ ದಳಗಳೂ ವಯನಾಡ್ ನಗರದಿಂದ ನಿರ್ಗಮಿಸಿದವು.

ವಯನಾಡ್ ಜಿಲ್ಲೆಯ ಚೂರಲ್ ಮಲ ಹಾಗೂ ಮುಂಡಕ್ಕೈನಲ್ಲಿ ಜೂನ್ 30ರಂದು ಅಪ್ಪಳಿಸಿದ ಭೀಕರ ಭೂಕುಸಿತದಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದರು. ಇದರಿಂದ ವ್ಯಾಪಕ ಆಸ್ತಿಪಾಸ್ತಿ ಹಾನಿಯೂ ಉಂಟಾಗಿತ್ತು.

ಘಟನಾ ಸ್ಥಳಕ್ಕೆ ಧಾವಿಸಿದ್ದ ಭಾರತೀಯ ಸೇನೆ ಹಾಗೂ ಭಾರತೀಯ ವಾಯು ಪಡೆಯು ಸಿಬ್ಬಂದಿಗಳು ಹಾಗೂ ರಾಜ್ಯ ಪ್ರಾಧಿಕಾರಗಳು ಸತತ 10 ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News