×
Ad

ಯಮುನಾ ನದಿ ಪ್ರವಾಹದಲ್ಲಿ ಸಿಲುಕಿದ್ದ 1 ಕೋ.ರೂ.ಬೆಲೆಯ ಗೂಳಿ ರಕ್ಷಿಸಿದ ರಕ್ಷಣಾ ಪಡೆ

Update: 2023-07-15 15:18 IST

ಫೋಟೋ: ಟ್ವಿಟ್ಟರ್@NDRF

ಹೊಸದಿಲ್ಲಿ: ಉಕ್ಕಿ ಹರಿಯುತ್ತಿರುವ ಯಮುನಾ ನದಿಯ ಪ್ರವಾಹದಿಂದಾಗಿ ನೋಯ್ಡಾದಲ್ಲಿ ಸಿಲುಕಿರುವ ಪ್ರಾಣಿಗಳಿಗೆ ವಿಪತ್ತು ರಕ್ಷಣಾ ತಂಡಗಳಿಂದ ಸಹಾಯ ಹಸ್ತ ದೊರೆತಿದೆ. 1 ಕೋಟಿ ರೂ. ಬೆಲೆಯ ಪ್ರೀತಮ್' ಹೆಸರಿನ ಗೂಳಿಯು ರಕ್ಷಿಸಲ್ಪಟ್ಟ ಪ್ರಾಣಿಗಳಲ್ಲಿ ಎಲ್ಲ ಗಮನ ಸೆಳೆದಿದೆ.

ರಕ್ಷಣಾ ತಂಡವು ಜಾನುವಾರು ಹಾಗೂ ಮೇಕೆಗಳನ್ನು ರಕ್ಷಿಸುವ ಫೋಟೋಗಳು ಹಾಗೂ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದು, ಗಾಝಿಯಾಬಾದ್ ನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ ಡಿಆರ್ ಎಫ್) 8 ನೇ ಬೆಟಾಲಿಯನ್ ಟ್ವೀಟ್ ಮಾಡಿದೆ,

"ಟೀಮ್ @8NdrfGhaziabad ಭಾರತದ ನಂ.1 ಬುಲ್ 1 ಕೋಟಿ ರೂ. ಬೆಲೆಯ ಪ್ರೀತಮ್" ಸೇರಿದಂತೆ 3 ಜಾನುವಾರುಗಳನ್ನು ರಕ್ಷಿಸಿದೆ. ನೋಯ್ಡಾ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜೀವ ಉಳಿಸಲು NDRF ತಂಡಗಳು ಶ್ರಮಿಸುತ್ತಿವೆ’’ ಎಂದು ಟ್ವೀಟಿಸಿದೆ.

ಯಮುನಾ ನದಿಯ ನೀರು ನೋಯ್ಡಾದಲ್ಲಿ ನದಿಯ ದಡದಲ್ಲಿ ಸುಮಾರು 550 ಹೆಕ್ಟೇರ್ ಭೂಮಿಯನ್ನು ಮುಳುಗಿಸಿದೆ, 5,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು ಪ್ರವಾಹವು ಎಂಟು ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಗುರುವಾರದಿಂದ ದನಗಳು, ನಾಯಿಗಳು, ಮೊಲಗಳು, ಬಾತುಕೋಳಿಗಳು ಸೇರಿದಂತೆ ಸುಮಾರು 6,000 ಪ್ರಾಣಿಗಳನ್ನು ಮುಳುಗಡೆಯಾದ ಪ್ರದೇಶಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News