×
Ad

ಕೇಂದ್ರ ನೌಕರರ ತುಟ್ಟಿ ಭತ್ತೆ ಶೇ. 4 ರಷ್ಟು ಹೆಚ್ಚಳ

Update: 2024-03-07 23:28 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ತೆ ಹಾಗೂ ಪಿಂಚಣಿದಾರರ ತುಟ್ಟಿ ಭತ್ತೆ ಪರಿಹಾರ (ಡಿಆರ್) ಅನ್ನು ಶೇ. 4ರಷ್ಟು ಹೆಚ್ಚಿಸಲು ಕೇಂದ್ರ ಸಂಪುಟ ಗುರುವಾರ ಅನುಮೋದನೆ ನೀಡಿದೆ.

2024ರ ಜನವರಿ 1ರಿಂದ ಪೂರ್ವಾನ್ವಯಗೊಳ್ಳುವಂತೆ ಈ ಹೆಚ್ಚಳ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತುಟ್ಟಿ ಭತ್ತೆ ಹಾಗೂ ತುಟ್ಟಿ ಭತ್ತೆ ಪರಿಹಾರ ಏರಿಕೆಯಿಂದ ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕವಾಗಿ 12,868.72 ಕೋಟಿ ರೂ. ಹೊರೆ ಬೀಳಲಿದೆ. 49.18 ಲಕ್ಷ ಕೇಂದ್ರ ಸರಕಾರದ ಉದ್ಯೋಗಿಗಳು ಹಾಗೂ 67.95 ಲಕ್ಷ ಪಿಂಚಣಿದಾರರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ಕೇಂದ್ರ ಸರಕಾರದ ಹೇಳಿಕೆಯೊಂದು ತಿಳಿಸಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News