×
Ad

ಭಾರತದ ಆರ್ಥಿಕ ಬೆಳವಣಿಗೆಯ ಮುನ್ನಂದಾಜನ್ನು ಶೇ.7ಕ್ಕೇರಿಸಿದ ವಿಶ್ವಬ್ಯಾಂಕ್

Update: 2024-09-03 21:58 IST

PC : X

ಹೊಸದಿಲ್ಲಿ : ಭಾರತದ ಆರ್ಥಿಕ ಬೆಳವಣಿಗೆಯ ಮುನ್ನಂದಾಜನ್ನು ವಿಶ್ವಬ್ಯಾಂಕ್ 2024-2025ನೇ ಸಾಲಿನಲ್ಲಿ ಶೇ.6.6ರಿಂದ ಶೇ.7ಕ್ಕೇರಿಸಿದೆ. ಇಳಿಮುಖವಾಗುತ್ತಿರುವ ಹಣದುಬ್ಬರ, ದೃಢವಾದ ಬೆಳವಣಿಗೆ ಅವಕಾಶಗಳು ಕಡುಬಡತನವನ್ನು ಕಡಿಮೆಗೊಳಿಸಲು ಭಾರತಕ್ಕೆ ನೆರವಾಗಲಿದೆಯೆಂದು ವರದಿ ತಿಳಿಸಿದೆ.

2023-2024ನೇ ಸಾಲಿನಲ್ಲಿ ಭಾರತವು 8.2 ಶೇಕಡ ಆರ್ಥಿಕ ಬೆಳವಣಿಗೆಯೊಂದಿಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೆನಿಸಿಕೊಂಡಿತ್ತು. ಸುಧಾರಿತ ಕಾರ್ಮಿಕ ಮಾರುಕಟ್ಟೆ ಹಾಗೂ ಸೇವಾ ಕ್ಷೇತ್ರದಲ್ಲಿ ಮುಂದುವರಿದ ಪ್ರಗತಿಯು ಭಾರತದ ಆರ್ಥಿಕತೆಯ ಬೆಳವಣಿಗೆಗೆ ಪುಷ್ಠಿ ನೀಡಿದೆ. ಸಾರ್ವಜನಿಕ ಮೂಲಸೌಕರ್ಯ ಹೂಡಿಕೆ ಹಾಗೂ ರಿಯಲ್ ಎಸ್ಟೇಟ್ ಹೂಡಿಕೆಗಳಲ್ಲಿ ಹೆಚ್ಚಳವು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ ಭಾರತವನ್ನು ಕೇಂದ್ರೀಕರಿಸಿದ ವಿಶ್ವಬ್ಯಾಂಕ್‌ವರದಿ ಹೇಳಿದೆ.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶ್ರಮಿಕ ಶಕ್ತಿಗೆ ಸೇರ್ಪಡೆಗೊಳ್ಳುವ ಮೂಲಕ ನಗರ ಪ್ರದೇಶಗಳ ನಿರುದ್ಯೋಗ ಪ್ರಮಾಣವು ಹಂತಹಂತವಾಗಿ ಇಳಿಮುಖವಾಗುತ್ತಿದೆ. 2025ರ ಆರಂಭಲ್ಲಿ ನಗರಗಳಲ್ಲಿ ಮಹಿಳೆಯರ ನಿರುದ್ಯೋಗ ಪ್ರಮಾಣವು ಶೇ.8.5ಕ್ಕೆ ಇಳಿಯಲಿದೆ. ಆದಾಗ್ಯೂ ಒಟ್ಟಾರೆ ನಗರ ಪ್ರದೇಶಗಳಲ್ಲಿ ಯುವಜನರ ನಿರುದ್ಯೋಗ ಪ್ರಮಾಣವು ಶೇ.17ರಲ್ಲಿಯೇ ಉಳಿದುಕೊಂಡಿದೆ . ಆರ್ಥಿಕ ಬೆಳವಣಿಗೆಯು 2026ರ ಹಣಕಾಸು ವರ್ಷದಲ್ಲಿ ಶೇ.6.7 ಹಾಗೂ 2027ರ ಹಣಕಾಸು ವರ್ಷದಲ್ಲಿ ಶೇ.6.8 ಆಗಲಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News