×
Ad

ಈ ಬಾರಿಯ ಚುನಾವಣೆ ರಾಹುಲ್ ಗಾಂಧಿ Vs ನರೇಂದ್ರ ಮೋದಿ, ಜಿಹಾದ್ Vs ವಿಕಾಸ್ : ಅಮಿತ್ ಶಾ

Update: 2024-05-09 19:15 IST

Photo : X/@BJP4India

ಭೋಂಗಿರ್ (ತೆಲಂಗಾಣ): 2024ರ ಲೋಕಸಭಾ ಚುನಾವಣೆಯು ರಾಹುಲ್ ಗಾಂಧಿ Vs ನರೇಂದ್ರ ಮೋದಿ ಚುನಾವಣೆಯಾಗಿದೆ ಎಂದು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ತೆಲಂಗಾಣದ ಭೋಂಗಿರ್ ಲೋಕಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, “2024ರ ಚುನಾವಣೆಯು ರಾಹುಲ್ ಗಾಂಧಿ Vs ನರೇಂದ್ರ ಮೋದಿ ಚುನಾವಣೆಯಾಗಿದೆ. ಈ ಚುನಾವಣೆಯು ಜಿಹಾದ್ ಗಾಗಿ ಮತದ ವಿರುದ್ಧ ವಿಕಾಸಕ್ಕಾಗಿ ಮತದ ಚುನಾವಣೆಯಾಗಿದೆ” ಎಂದು ಪ್ರತಿಪಾದಿಸಿದರು. ಈ ಕ್ಷೇತ್ರದಲ್ಲಿ ಮೇ 13ರಂದು ಮತದಾನ ನಡೆಯಲಿದೆ.

ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯು ರಾಹುಲ್ ಗಾಂಧಿಯ ಚೀನಾ ಗ್ಯಾರಂಟಿ ವಿರುದ್ಧದ ಮೋದಿಯ ಭಾರತೀಯ ಗ್ಯಾರಂಟಿ ಚುನಾವಣೆಯಾಗಿದೆ ಎಂದೂ ಅವರು ವ್ಯಾಖ್ಯಾನಿಸಿದರು.

ಕಾಂಗ್ರೆಸ್, ಬಿ ಆರ್ ಎಸ್ ಹಾಗೂ ಎಐಎಂಐಎಂ ತುಷ್ಟೀಕರಣದ ತ್ರಿಕೋನ ಎಂದು ಬಣ್ಣಿಸಿದ ಅಮಿತ್ ಶಾ, “ಈ ಜನರು ಸೆಪ್ಟೆಂಬರ್ 17ರ ಹೈದರಾಬಾದ್ ವಿಮೋಚನಾ ದಿನದ ಸಂಭ್ರಮಾಚರಣೆಗೆ ಅವಕಾಶ ನೀಡುವುದಿಲ್ಲ. ಈ ಜನರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಾರೆ. ಈ ಜನರು ತೆಲಂಗಾಣವನ್ನು ಶರಿಯಾ ಮತ್ತು ಕುರಾನ್ ಆಧರಿಸಿ ಆಡಳಿತ ನಡೆಸಲು ಬಯಸುತ್ತಿದ್ದಾರೆ” ಎಂದು ಆರೋಪಿಸಿದರು.

2019ರಲ್ಲಿ ತೆಲಂಗಾಣದಲ್ಲಿ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯು ಈ ಬಾರಿ ಹತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಈ ಎರಡಂಕಿಯ ಸಾಧನೆಯು ಪ್ರಧಾನಿ ನರೇಂದ್ರ ಮೋದಿಯು ಲೋಕಸಭೆಯಲ್ಲಿ 400 ಸ್ಥಾನಗಳ ಗಡಿಯನ್ನು ದಾಟಲು ನೆರವು ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News