×
Ad

ಇದು ನಮ್ಮ ದೇಶದ ಐತಿಹಾಸಿಕ ಸಂಸತ್ ಚುನಾವಣೆ: ಅಸದುದ್ದೀನ್ ಉವೈಸಿ

Update: 2024-05-13 10:01 IST

ಎಐಎಂಐಎಂ ಅಭ್ಯರ್ಥಿ ಅಸದುದ್ದೀನ್ ಉವೈಸಿ ಕುಟುಂಬ ಸಮೇತ ಮತ ಚಲಾಯಿಸಿದರು. Photo: FB

ಹೈದರಾಬಾದ್ : "ಪ್ರತಿ ಚುನಾವಣೆಯು 5 ವರ್ಷಗಳ ಹಿಂದಿನಂತೆಯೇ ಇರಲು ಸಾಧ್ಯವಿಲ್ಲ. ಇದು ನಮ್ಮ ದೇಶದಲ್ಲಿ ಬಹಳ ಮುಖ್ಯವಾದ, ಸಂಸತ್ತಿನ ಐತಿಹಾಸಿಕ ಚುನಾವಣೆ” ಎಂದು ಎಐಎಂಐಎಂ ಅಭ್ಯರ್ಥಿ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

ಹೈದರಾಬಾದ್‌ ನಲ್ಲಿ ಸೋಮವಾರ ಬೆಳಿಗ್ಗೆ ತಮ್ಮ ಮತ ಚಲಾಯಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಾಲ್ಕನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್‌ ಕ್ಷೇತ್ರಕ್ಕೂ ಚುನಾವಣೆ ನಡೆಯತ್ತಿದೆ.

“ಹಿಂದಿನ ಚುನಾವಣೆಗಳಿಗಿಂತ ಸವಾಲುಗಳು, ಸಮಸ್ಯೆಗಳು ವಿಭಿನ್ನವಾಗಿವೆ. ಜನರಿಗೆ ದೇಶದ ಅಗತ್ಯತೆಯ ಬಗ್ಗೆ ತುಂಬಾ ಆಕಾಂಕ್ಷೆಗಳಿವೆ. ಚುನಾವಣೆಗಳನ್ನು ಯಾವಾಗಲೂ ಗಂಭೀರವಾಗಿ ತೆಗೆದುಕೊಳ್ಳಬೇಕು. ಅದು ಸಂಸತ್ತಿನ ಚುನಾವಣೆಯಾಗಿರಲಿ ಅಥವಾ ಪಂಚಾಯತ್ ಚುನಾವಣೆಯಾಗಿರಲಿ” ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News