×
Ad

ಜೈಲಿನಲ್ಲಿರುವ ಸಂಜಯ ಸಿಂಗ್ ಸೇರಿದಂತೆ ಆಪ್ ನ ಮೂವರು ರಾಜ್ಯಸಭೆಗೆ ಆಯ್ಕೆ

Update: 2024-01-12 21:09 IST

ಸಂಜಯ ಸಿಂಗ್ | Photo: PTI 

ಹೊಸದಿಲ್ಲಿ: ಜೈಲಿನಲ್ಲಿರುವ ನಾಯಕ ಸಂಜಯ ಸಿಂಗ್ ಸೇರಿದಂತೆ ಆಪ್ ನ ಎಲ್ಲ ಮೂವರು ಅಭ್ಯರ್ಥಿಗಳು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ದಿಲ್ಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್, ಸಂಜಯ ಸಿಂಗ್ ಮತ್ತು ಎನ್.ಡಿ.ಗುಪ್ತಾ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದು, ಆಪ್ ಮಲಿವಾಲ್ ಅವರನ್ನು ಮೊದಲ ಬಾರಿಗೆ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದರೆ, ಸಿಂಗ್ ಮತ್ತು ಗುಪ್ತಾ ಅವರನ್ನು ಮರು ನಾಮನಿರ್ದೇಶನಗೊಳಿಸಿತ್ತು.

ಸಿಂಗ್, ಎನ್.ಡಿ.ಗುಪ್ತಾ ಮತ್ತು ಸುಶೀಲ್ ಕುಮಾರ ಗುಪ್ತಾ ಅವರ ಆರು ವರ್ಷಗಳ ಅವಧಿಯು ಜ.27ಕ್ಕೆ ಅಂತ್ಯಗೊಳ್ಳುತ್ತದೆ. ಆಪ್ ಸುಶೀಲ್ ಕುಮಾರ ಗುಪ್ತಾ ಬದಲಿಗೆ ಮಲಿವಾಲ್ ಅವರನ್ನು ನಾಮಕರಣ ಮಾಡಿತ್ತು ಮತ್ತು ಇದರ ಬೆನ್ನಿಗೇ ಮಲಿವಾಲ್ ಡಿಸಿಡಬ್ಲ್ಯು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News