×
Ad

ಲಂಚದ ಹಣವನ್ನು ಹಂಚಿಕೊಳ್ಳುತ್ತಿದ್ದ ವಿಡಿಯೋ ವೈರಲ್; ಮೂವರು ದಿಲ್ಲಿ ಸಂಚಾರಿ ಪೊಲೀಸರು ಅಮಾನತು

Update: 2024-08-18 12:46 IST

Screengrab: X/@iAtulKrishan1

ಹೊಸದಿಲ್ಲಿ: ಲಂಚ ಪಡೆದು, ಅದನ್ನು ಹಂಚಿಕೊಳ್ಳುತ್ತಿದ್ದ ಮೂವರು ದಿಲ್ಲಿ ಸಂಚಾರಿ ಪೊಲೀಸರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ಬೆನ್ನಿಗೇ ಅವರನ್ನೆಲ್ಲ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಘಟನೆಯು ಶನಿವಾರ ಘಾಝಿಪುರ್ ನ ಥ್ರಿಲ್ ಲೌರಿ ವೃತ್ತದಲ್ಲಿರುವ ಪೊಲೀಸ್ ತಪಾಸಣಾ ಠಾಣೆಯ ಬಳಿ ನಡೆದಿದೆ ಎಂದು ಹೇಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ಓರ್ವ ಪೊಲೀಸ್ ಹಣದ ಕಂತೆಯನ್ನು ಸ್ವೀಕರಿಸುವುದಕ್ಕೂ ಮುನ್ನ ಮತ್ತೊಬ್ಬ ವ್ಯಕ್ತಿಯೊಂದಿಗೆ ವಾಗ್ದಾದ ನಡೆಸುತ್ತಿರುವುದು, ನಂತರ ಅದನ್ನು ತನ್ನ ಹಿಂದಿನ ಮೇಜಿನ ಮೇಲೆ ಇಡುತ್ತಿರುವುದು ಕಂಡು ಬಂದಿದೆ.

ಆ ವ್ಯಕ್ತಿ ಅಲ್ಲಿಂದ ತೆರಳಿದ ನಂತರ, ಸದರಿ ಪೊಲೀಸ್ ಅಧಿಕಾರಿಯು, ಆ ಹಣದ ಕಂತೆಯನ್ನು ಎಣಿಸುತ್ತಿರುವುದು ಹಾಗೂ ನಂತರ ಆ ಹಣವನ್ನು ತನ್ನ ಇನ್ನಿಬ್ಬರು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಿರುವುದೂ ಸೆರೆಯಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿನ ಈ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ, ಈ ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರು ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಗಳು ಹಾಗೂ ಓರ್ವ ಮುಖ್ಯ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.

ಈ ಕುರಿತು ಸಮಗ್ರ ಇಲಾಖಾ ತನಿಖೆ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News