×
Ad

ಸಂಚಾರ ನಿಯಮ ಉಲ್ಲಂಘನೆ: ರಾಜಸ್ತಾನ ಉಪ ಮುಖ್ಯಮಂತ್ರಿಯ ಅಪ್ರಾಪ್ತ ವಯಸ್ಕ ಪುತ್ರನಿಗೆ ರೂ. 7,000 ದಂಡ

Update: 2024-10-05 15:01 IST

PC : X 

ಜೈಪುರ:ಮಾರ್ಪಾಡುಗೊಂಡಿದ್ದ ಕಾರನ್ನು ಸರಕಾರಿ ವಾಹನದ ಬೆಂಗಾವಲಿನೊಂದಿಗೆ ಚಲಾಯಿಸಿದ್ದ ರಾಜಸ್ತಾನ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಪ್ರೇಮ್ ಚಂದ್ ಬೈರ್ವರ ಅಪ್ರಾಪ್ತ ಪುತ್ರನಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಸಾರಿಗೆ ಇಲಾಖೆಯು ರೂ. 7,000 ದಂಡ ವಿಧಿಸಿದೆ.

ಕಳೆದ ವಾರ ಬೈರ್ವಾರ ಪುತ್ರ ಕಾಂಗ್ರೆಸ್ ನಾಯಕ ಪುಷ್ಪೇಂದ್ರ ಭಾರದ್ವಾಜ್ ಅವರ ಪುತ್ರ ಹಾಗೂ ಇನ್ನಿಬ್ಬರು ಸ್ನೇಹಿತರೊಂದಿಗೆ ಜೈಪುರ ರಸ್ತೆಯಲ್ಲಿರುವ ಆಂಬರ್ ರಸ್ತೆಯಲ್ಲಿ ವಾಹನ ಚಲಾಯಿಸಿದ್ದರು. ಚಲನ್ ಪ್ರಕಾರ, ವಾಹನವು ಭಾರದ್ವಾಜ್ ಅವರ ಪುತ್ರನಿಗೆ ಸೇರಿದೆ. ಬೈರ್ವಾರ ಪುತ್ರ ವಾಹನವನ್ನು ಚಲಾಯಿಸುವಾಗ ಪೊಲೀಸ್ ದೀಪವನ್ನು ಹೊಂದಿದ್ದ ಸರಕಾರಿ ವಾಹನವೊಂದು ಅವರ ವಾಹನದ ಬೆಂಗಾವಲಾಗಿ ಚಲಿಸುತ್ತಿದ್ದದ್ದು ಕಂಡು ಬಂದಿತ್ತು.

ಅಕ್ಟೋಬರ್ 1ರಂದು ಭಾರದ್ವಾಜ್ ಅವರ ಪುತ್ರನಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಏಳು ದಿನಗಳೊಳಗಾಗಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಲಾಗಿದೆ. ಆದರೆ, ನಾನು ಇದುವರೆಗೆ ಯಾವುದೇ ನೋಟಿಸ್ ಸ್ವೀಕರಿಸಿಲ್ಲ ಎಂದು ಪುಷ್ಪೇಂದ್ರ ಭಾರದ್ವಾಜ್ The Indian Express ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News