×
Ad

ಅಧಿಕಾರಿಗಳ ವರ್ಗಾವಣೆ: ದುರುದ್ದೇಶದ ಆರೋಪಗಳನ್ನು ತಳ್ಳಿಹಾಕಿದ ಸಿಎಜಿ

Update: 2023-10-13 23:10 IST

Photo: telanganatoday.com

ಹೊಸದಿಲ್ಲಿ: ಕೇಂದ್ರದ ಭಾರತಮಾಲಾ ಮತ್ತು ಆಯುಷ್ಮಾನ ಭಾರತ ಯೋಜನೆಗಳಲ್ಲಿಯ ಆರೋಪಿತ ಅಕ್ರಮಗಳ ಮೇಲೆ ಬೆಳಕು ಚೆಲ್ಲಿದ್ದ ಆಡಿಟರ್ಗಳ ವರ್ಗಾವಣೆಯಲ್ಲಿ ಯಾವುದೇ ದುರುದ್ದೇಶವನ್ನು ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲ (ಸಿಎಜಿ)ರ ಕಚೇರಿಯು ಶುಕ್ರವಾರ ನಿರಾಕರಿಸಿದೆ. ವರ್ಗಾವಣೆಗಳು ಮತ್ತು ನಿಯೋಜನೆಗಳು ಆಡಳಿತಾತ್ಮಕ ಅನುಕೂಲದ ವಿಷಯಗಳಾಗಿವೆ ಮತ್ತು ಇದಕ್ಕೆ ದುರುದ್ದೇಶವನ್ನು ಅರ್ಥೈಸುವುದು ಅತ್ಯಂತ ಅತಿರೇಕದ್ದಾಗಿದೆ ಎಂದು ಅದು ಹೇಳಿದೆ.

ಸಂಸತ್ತಿನಲ್ಲಿ ಮಂಡನೆಗಾಗಿ ಅನುಮೋದಿಸಲ್ಪಡುವ ಮುನ್ನ ಆಡಿಟ್ ವರದಿಗಳು ಹಲವರಿಂದ ಪರಿಶೀಲನೆಗೆ ಒಳಪಟ್ಟಿದ್ದವು ಎಂದು ಸಿಎಜಿ ಹೇಳಿಕೆಯಲ್ಲಿ ತಿಳಿಸಿದೆ.

ದ್ವಾರಕಾ ಎಕ್ಸ್ ಪ್ರೆಸ್ ವೇ ಮತ್ತು ಆಯುಷ್ಮಾನ್ ಭಾರತ ಯೋಜನೆಗಳಲ್ಲಿ ಆರೋಪಿತ ಅಕ್ರಮಗಳ ಮೇಲೆ ಬೆಳಕು ಚೆಲ್ಲಿದ್ದ ಲೆಕ್ಕಪರಿಶೋಧನೆ ವರದಿಗಳ ಉಸ್ತುವಾರಿಯನ್ನು ಹೊತ್ತಿದ್ದ ಆಡಿಟರ್ಗಳಾದ ಅತೂರ್ವ ಸಿನ್ಹಾ ಮತ್ತು ಡಿ.ಕೆ.ಶಿರ್ಸಾ ಹಾಗೂ ಆಯುಷ್ಮಾನ ಭಾರತದ ಲೆಕ್ಕಪರಿಶೋಧನೆಯನ್ನು ಆರಂಭಿಸಿದ್ದ ಅಶೋಕ ಸಿನ್ಹಾ ಅವರ ವರ್ಗಾವಣೆಗಾಗಿ ಕಾಂಗ್ರೆಸ್ ಪಕ್ಷವು ಸರಕಾರವನ್ನು ಟೀಕಿಸಿದ ಬಳಿಕ ಸಿಎಜಿ ಹೇಳಿಕೆ ಹೊರಬಿದ್ದಿದೆ.

ಎರಡೂ ಉಲ್ಲೇಖಿತ ಲೆಕ್ಕಪರಿಶೋಧಕ ವರದಿಗಳನ್ನು ಉನ್ನತ ಹಂತದಲ್ಲಿ ಅನುಮೋದನೆಯ ಬಳಿಕವೇ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿತ್ತು ಮತ್ತು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಈ ವರದಿಗಳು ಆನ್ ಲೈನ್ ನಲ್ಲಿ ಸಾರ್ವಜನಿಕರಿಗೆ ಲಭ್ಯವಿವೆ ಎಂದೂ ಸಿಎಜಿ ಹೇಳಿಕೆಯು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News