×
Ad

ಮಹಾರಾಷ್ಟ್ರ| ರಸ್ತೆ ಪರಿಶೀಲನೆ‌ ವೇಳೆ ಟ್ರಕ್‌ ಪಲ್ಟಿ: ಕೂದಲೆಳೆ ಅಂತರದಲ್ಲಿ ಪಾರಾದ ಗುಂಪು

Update: 2025-07-11 12:40 IST

Screengrab: X/@Bavazir_network

ಬೀಡ್: ರಸ್ತೆ ದುರಸ್ತಿ ಪರಿಶೀಲನೆ ವೇಳೆ, ಟ್ರಕ್ ಒಂದು ಪಲ್ಟಿಯಾಗಿದ್ದು, ಎಂಜಿನಿಯರ್ ಸೇರಿದಂತೆ ಹಲವರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ವಡ್ವಾನಿ ತಾಲೂಕಿನಲ್ಲಿರುವ ಖಡ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ವೈರಲ್‌ ಆಗಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಡೆಯುತ್ತಿರುವ ರಸ್ತೆ ದುರಸ್ತಿ ಪರಿಶೀಲನೆಗಾಗಿ ಸುಮಾರು ಹತ್ತು-ಹನ್ನೆರಡು ಮಂದಿ ಸೇರಿದ್ದರು ಎಂದು ವರದಿಯಾಗಿದೆ. ಸ್ಥಳೀಯ ನಿವಾಸಿಗಳು ರಸ್ತೆಯ ಕಳಪೆ ಸ್ಥಿತಿ ಮತ್ತು ಪರ್ಯಾಯ ಮಾರ್ಗದ ಕೊರತೆಯ ಬಗ್ಗೆ ದೂರು ನೀಡಿದ್ದನ್ನು ಆಧರಿಸಿ, ಪ್ರಗತಿ ನಿರ್ಣಯಿಸಲು ಆಗಮಿಸಿದ್ದ ಸಿವಿಲ್ ಇಂಜಿನಿಯರ್ ಕೂಡ ಇದ್ದರು.

ಪರಿಶೀಲನೆ ನಡೆಯುತ್ತಿರುವಾಗ, ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಟ್ರಕ್ ಸಮತೋಲನ ಕಳೆದುಕೊಂಡಿದ್ದು, ಗುಂಪು ನಿಂತಿದ್ದ ಕೆಲವೇ ಮೀಟರ್‌ ಅಂತರದಲ್ಲಿ ಪಲ್ಟಿಯಾಗಿದೆ.

ತಕ್ಷಣವೇ ಜನರು ಚೆಲ್ಲಾ ಪಿಲ್ಲಿಯಾಗಿ ಓಡಿದ್ದು, ಕೆಲವರು ಸೇತುವೆ ನಿರ್ಮಾಣಕ್ಕಾಗಿ ಅಗೆದ ಹೊಂಡಕ್ಕೆ ಹಾರಿದ್ದು ವಿಡಿಯೋದಲ್ಲಿ ಕಂಡು ಬಂದಿದೆ.

ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವಾಗ ಪರ್ಯಾಯ ರಸ್ತೆಗಾಗಿ ಸ್ಥಳೀಯರು ಈ ಹಿಂದೆ ಹಲವಾರು ದೂರುಗಳನ್ನು ಸಲ್ಲಿಸಿದ್ದರು. ಎಂಜಿನಿಯರ್ ಪರಿಶೀಲನೆ ನಡೆಸುತ್ತಿರುವಾಗಲೇ ಈ ಘಟನೆ ನಡೆದಿದ್ದು, ಆಕ್ರೋಶವನ್ನು ಹುಟ್ಟುಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News