×
Ad

ಪಂಜಾಬ್ ರಾಜ್ಯಪಾಲರ ಬೆಂಗಾವಲು ವಾಹನದ ಟೈರ್ ಸಿಡಿದು ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

Update: 2024-07-24 21:47 IST

ಬನ್ವಾರಿಲಾಲ್ ಪುರೋಹಿತ್ | PC : PTI 

 ಅಮೃತಸರ : ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ಬೆಂಗಾವಲು ವಾಹನದ ಟೈರ್ ಸಿಡಿದ ಪರಿಣಾಮ ಇಬ್ಬರು ಭದ್ರತಾಸಿಬ್ಬಂದಿಗೆ ಸಣ್ಣಪುಟ್ಚ ಗಾಯಗಳಾದ ಘಟನೆ ಇಲ್ಲಿಗೆ ಸಮೀಪದ ಘರಿಂಡಾ ಗ್ರಾಮದಲ್ಲಿ ಸಂಭವಿಸಿದೆ.

ರಾಜ್ಯಪಾಲರ ಬೆಂಗಾವಲು ವಾಹನಗಳೊಂದಿಗೆ ಸಂಚರಿಸುತ್ತಿದ್ದ ಜೀಪಿನ ಟೈರ್ ಹಠಾತ್ತನೆ ಸಿಡಿದಿತ್ತು. ಆಗ ಜೀಪಿನ ಚಾಲಕ ವಾಹನವನ್ನು ನಿಲ್ಲಿಸಲು ಯತ್ನಿಸಿದಾಗ ಇಬ್ಬರು ಭದ್ರತಾ ಸಿಬ್ಬಂದಿಗಳು ಗಾಯಗೊಂಡರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಗಾಯಾಳುಗಳನ್ನು ಅಮೃತಸರದ ಗುರುನಾನಕ್ದೇವ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಪಂಜಾಬ್ನ ಗಡಿಭಾಗದ ಹಳ್ಳಿಗಳ ಭೇಟಿಗಾಗಿ ಆಗಮಿಸಿದ್ದರು. ಅವರು ಗಡಿಪ್ರದೇಶದ ವಿವಿಧ ಹಳ್ಳಿಗಳಲ್ಲಿ ಗ್ರಾಮ ರಕ್ಷಣಾ ಸಮಿತಿಗಳ ಜೊತೆ ಸಭೆಯನ್ನು ನಡೆಸಿದರು ಎಂದು ಘರಿಂಡಾ ಠಾಣಾಧಿಕಾರಿ ಕರಮ್ಪಾಲ್ ಸಿಂಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News