×
Ad

ಊಟದ ವಿಚಾರಕ್ಕೆ ಜಗಳ: ಸಹೋದ್ಯೋಗಿಯಿಂದ ಇಬ್ಬರು ಯೋಧರ ಹತ್ಯೆ

Update: 2024-09-19 08:04 IST

PC: x.com/htTweets

ರಾಯಪುರ: ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಛತ್ತೀಸ್ ಗಢ ಸಶಸ್ತ್ರ ಪಡೆಯ (ಸಿಎಎಫ್) ಯೋಧನೊಬ್ಬ ಇಬ್ಬರು ಸಹೋದ್ಯೋಗಿಗಳನ್ನು ಗುಂಡುಹಾರಿಸಿ ಹತ್ಯೆ ಮಾಡಿದ ಘಟನೆ ಛತ್ತೀಸ್ ಗಢದ ಬಲರಾಂ ಪುರ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ಇತರ ಯೋಧರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಸಿಎಎಫ್ 11ನೇ ಬೆಟಾಲಿಯನ್ ಗೆ ಸೇರಿದ ಭುತಹಿ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದೆ ಎಂದು ಬಲರಾಂ ಪುರ ಎಸ್ಪಿ ರಾಜೇಶ್ ಅಗರ್ವಾಲ್ ಹೇಳಿದ್ದಾರೆ.

ಊಟದಲ್ಲಿ ಕೆಲ ಅಂಶಗಳಿಲ್ಲ ಎಂಬ ಕಾರಣಕ್ಕೆ ಜಗಳ ಆರಂಭಿಸಿದ ಅಜಯ್ ಎಂಬಾತ ಇನ್ಸಾಸ್ ರೈಫಲ್ ನಿಂದ ತನ್ನ ಸಹೋದ್ಯೋಗಿಗಳತ್ತ ಗುಂಡು ಹಾರಿಸಿದ. ಯೋಧ ರೂಪೇಶ್ ಪಟೇಲ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡ ಮತ್ತೊಬ್ಬ ಯೋಧ ಸಂದೀಪ್ ಪಾಂಡೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟ. ಅಂಬುಜ್ ಶುಕ್ಲ ಮತ್ತು ರಾಹುಲ್ ಬಘೇಲ್ ಅವರನ್ನು ಕುಸ್ಮಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಶುಕ್ಲ ಅವರ ದೇಹಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ ಅಂಬಿಕಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News