×
Ad

ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಸಿಇಒ ಸ್ಥಾನದಿಂದ ನಿರ್ಗಮಿಸಿದ ಉದಯ್‌ ಕೊಟಕ್‌

Update: 2023-09-02 21:00 IST

ಉದಯ್ ಕೋಟಕ್‌ | Photo : twitter \ @udaykotak

ಹೊಸದಿಲ್ಲಿ: ಕೋಟಕ್‌ ಮಹೀಂದ್ರಾ ಬ್ಯಾಂಕ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಉದಯ್ ಕೋಟಕ್‌ ಅವರು ರಾಜಿನಾಮೆ ನೀಡಿರುವುದಾಗಿ ಬ್ಯಾಂಕ್‌ ಹೇಳಿದೆ.

ರಾಜಿನಾಮೆಗೆ ನಿರ್ದಿಷ್ಟ ಕಾರಣವನ್ನು ತಿಳಿಸಿಲ್ಲವಾದರೂ, ಬ್ಯಾಂಕ್‌ನ ನಾನ್-ಎಕ್ಸಿಕ್ಯೂಟಿವ್‌ ನಿರ್ದೇಶಕರಾಗಿ ಉದಯ್‌ ಕೋಟಕ್‌ ಅವರು ಮುಂದುವರೆಯಲಿದ್ದಾರೆ ಎಂದು ಬ್ಯಾಂಕ್‌ ಮೂಲಗಳು ಹೇಳಿವೆ.

ಮಧ್ಯಂತರ ವ್ಯವಸ್ಥೆಯಾಗಿ, ಬ್ಯಾಂಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ದೀಪಕ್ ಗುಪ್ತಾ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸದಸ್ಯರ ಅನುಮೋದನೆಗೆ ಒಳಪಟ್ಟು ಡಿಸೆಂಬರ್ 31, 2023 ರವರೆಗೆ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ ಎಂದು ಬ್ಯಾಂಕ್ ತಿಳಿಸಿದೆ.

ಸಿಇಒ ಸ್ಥಾನದಿಂದ ಸ್ವಯಂಪ್ರೇರಣೆಯಿಂದ ಕೆಳಗಿಳಿಯುತ್ತಿರುವುದಾಗಿ ಉದಯ್ ಕೋಟಕ್‌ ಅವರು X (ಹಿಂದಿನ ಟ್ವಿಟರ್)‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News