×
Ad

ಕೇಂದ್ರ ಬಜೆಟ್ 2026 | ಗೃಹ ಸಚಿವಾಲಯಕ್ಕೆ 2.55 ಕೋಟಿ ರೂ. ಹಂಚಿಕೆ

Update: 2026-02-01 20:37 IST

ನಿರ್ಮಲಾ ಸೀತಾರಾಮನ್ (Photo: PTI)

ಹೊಸದಿಲ್ಲಿ, ಫೆ.1: ರವಿವಾರ ಲೋಕಸಭೆಯಲ್ಲಿ ಮಂಡಿಸಲಾದ 2026–27ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಗೃಹ ವ್ಯವಹಾರಗಳ ಸಚಿವಾಲಯಕ್ಕೆ 2,55,233.53 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ 1,73,802.53 ಕೋಟಿ ರೂ.ಗಳಷ್ಟು ಹೆಚ್ಚಿನ ಮೊತ್ತವನ್ನು ಆಂತರಿಕ ಭದ್ರತೆ, ಗಡಿ ಕಾವಲು ಮತ್ತು ಪ್ರಮುಖ ಸ್ಥಾವರಗಳ ರಕ್ಷಣೆಯ ಹೊಣೆಗಾರಿಕೆಯನ್ನು ಹೊಂದಿರುವ CRPF, BSP ಮತ್ತು CISF ನಂತಹ ಕೇಂದ್ರೀಯ ಪೊಲೀಸ್ ಪಡೆಗಳು ಪಡೆಯಲಿವೆ.

2025–26ರ ಬಜೆಟ್‌ ನಲ್ಲಿ ಗೃಹ ಸಚಿವಾಲಯಕ್ಕೆ 2,33,210.68 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27ರ ಬಜೆಟ್‌ ನಲ್ಲಿ ಗೃಹ ಸಚಿವಾಲಯದಡಿ ಮಾಡಿರುವ ಹಂಚಿಕೆಗಳು:

• ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳಿಗೆ 1,73,802.53 ಕೋಟಿ ರೂ.

• ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು–ಕಾಶ್ಮೀರ ಮತ್ತು ದಿಲ್ಲಿಗೆ ಅನುಕ್ರಮವಾಗಿ 43,290.29 ಕೋಟಿ ರೂ. ಮತ್ತು 1,348 ಕೋಟಿ ರೂ., ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಕ್ಕೆ 6,680.94 ಕೋಟಿ ರೂ., ಚಂಡಿಗಡಕ್ಕೆ 5,720.17 ಕೋಟಿ ರೂ., ದಾದ್ರಾ ಮತ್ತು ನಗರ ಹವೇಲಿ ಹಾಗೂ ದಾಮನ್ ಮತ್ತು ದಿಯುಗೆ 2,832.70 ಕೋಟಿ ರೂ., ಲಡಾಖ್‌ಗೆ 4,869.31 ಕೋಟಿ ರೂ., ಲಕ್ಷದ್ವೀಪಕ್ಕೆ 1,682.35 ಕೋಟಿ ರೂ. ಮತ್ತು ಪುದುಚೇರಿಗೆ 3,517.88 ಕೋಟಿ ರೂ.

• ಎ.1ರಿಂದ ಮೊದಲ ಹಂತ ಆರಂಭವಾಗಲಿರುವ ಜನಗಣತಿ ಸಂಬಂಧಿತ ಕೆಲಸಗಳಿಗೆ 6,000 ಕೋಟಿ ರೂ.

• ಗುಪ್ತಚರ ಸಂಸ್ಥೆಗೆ (ಐಬಿ) 6,782.43 ಕೋಟಿ ರೂ., ದಿಲ್ಲಿ ಪೊಲೀಸ್ ಪಡೆಗೆ 12,503.65 ಕೋಟಿ ರೂ., ಪ್ರಧಾನಿಗೆ ರಕ್ಷಣೆಯನ್ನು ಒದಗಿಸುವ ಎಸ್ಪಿಜಿಗೆ 499.99 ಕೋಟಿ ರೂ., ಜಮ್ಮು–ಕಾಶ್ಮೀರ ಪೊಲೀಸ್ ಪಡೆಗೆ 9,925.50 ಕೋಟಿ ರೂ.

• ರಾಜ್ಯ ಪೊಲೀಸ್ ಪಡೆಗಳು ಮತ್ತು ಅಪರಾಧ ಹಾಗೂ ಅಪರಾಧ ಪತ್ತೆ ನೆಟ್‌ವರ್ಕ್‌ ಗಳು ಮತ್ತು ಸಿಸ್ಟಮ್‌ ಗಳ (ಸಿಸಿಟಿಎನ್ಎಸ್) ಆಧುನೀಕರಣಕ್ಕೆ 450.54 ಕೋಟಿ ರೂ.

• ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸುರಕ್ಷತಾ ಸಂಬಂಧಿತ ವೆಚ್ಚ ಮತ್ತು ವಿಶೇಷ ಮೂಲಸೌಕರ್ಯ ಯೋಜನೆಗೆ 3,610.80 ಕೋಟಿ ರೂ.

• ಕೇಂದ್ರೀಯ ಸಶಸ್ತ್ರ ಪಡೆಗಳ ಆಧುನೀಕರಣ ಯೋಜನೆಗೆ 343.66 ಕೋಟಿ ರೂ.

• ಗಡಿ ಮೂಲಸೌಕರ್ಯ ಮತ್ತು ನಿರ್ವಹಣೆಗೆ 5,576.51 ಕೋಟಿ ರೂ.

• ಪೊಲೀಸ್ ಮೂಲಸೌಕರ್ಯಕ್ಕಾಗಿ 5,393.37 ಕೋಟಿ ರೂ.

• ಮಹಿಳಾ ಸುರಕ್ಷತೆ ಯೋಜನೆಗೆ 889.05 ಕೋಟಿ ರೂ.

• ಜೈಲುಗಳ ಆಧುನೀಕರಣಕ್ಕೆ 300 ಕೋಟಿ ರೂ.

• ವೈಬ್ರಂಟ್ ವಿಲೇಜಸ್ ಕಾರ್ಯಕ್ರಮಕ್ಕೆ 350 ಕೋಟಿ ರೂ. ಮತ್ತು ಅದರ ಎರಡನೇ ಹಂತಕ್ಕೆ 300 ಕೋಟಿ ರೂ.

• ಲ್ಯಾಂಡ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ, ನ್ಯಾಷನಲ್ ಫಾರೆನ್ಸಿಕ್ ಸೈನ್ಸ್ ಯುನಿವರ್ಸಿಟಿ ಮತ್ತು ರಾಷ್ಟ್ರೀಯ ರಕ್ಷಾ ವಿವಿ ಸೇರಿದಂತೆ ಸ್ವಾಯತ್ತ ಸಂಸ್ಥೆಗಳಿಗೆ 665.40 ಕೋಟಿ ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News