×
Ad

57 ಹೊಸ ಕೇಂದ್ರೀಯ ವಿದ್ಯಾಲಯಗಳಿಗೆ ಕೇಂದ್ರ ಸಂಪುಟದ ಅನುಮೋದನೆ

Update: 2025-10-02 21:43 IST

Photo Credit: kvsangathan.nic.in

ಹೊಸದಿಲ್ಲಿ,ಅ.2: 5,863 ಕೋ.ರೂ.ವೆಚ್ಚದಲ್ಲಿ ವಿಶ್ವಾದ್ಯಂತ 57 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಆರಂಭಿಸಲು ಕೇಂದ್ರ ಸಂಪುಟವು ಹಸಿರು ನಿಶಾನೆ ತೋರಿಸಿದೆ. ಈ ಪೈಕಿ ಏಳನ್ನು ಗೃಹ ಸಚಿವಾಲಯ ಮತ್ತು 50 ವಿದ್ಯಾಲಯಗಳನ್ನು ರಾಜ್ಯ ಸರಕಾರಗಳು ಪ್ರಾಯೋಜಿಸಲಿವೆ.

ಪ್ರಸ್ತುತ ಕೇಂದ್ರೀಯ ವಿದ್ಯಾಲಯಗಳಿಲ್ಲದ ಜಿಲ್ಲೆಗಳಲ್ಲಿ 20, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ 14, ಈಶಾನ್ಯ/ಗುಡ್ಡಗಾಡು ಪ್ರದೇಶಗಳಲ್ಲಿ ಐದು ವಿದ್ಯಾಲಯಗಳ ಆರಂಭವನ್ನು ಸಂಪುಟವು ಪ್ರಸ್ತಾವಿಸಿದೆ.

ಪ್ರಸ್ತುತ ದೇಶಾದ್ಯಂತ ಮತ್ತು ವಿದೇಶಗಳಲ್ಲಿ 1,288 ಕೇಂದ್ರೀಯ ವಿದ್ಯಾಲಯಗಳು ಕಾರ್ಯಾಚರಿಸುತ್ತಿದ್ದು,14 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುತ್ತಿವೆ. ಈ ಪೈಕಿ ಮೂರು ಕೇಂದ್ರೀಯ ವಿದ್ಯಾಲಯಗಳು ಮಾಸ್ಕೋ, ಕಠ್ಮಂಡು ಮತ್ತು ಟೆಹರಾನ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಈಗ 57 ನೂತನ ವಿದ್ಯಾಲಯಗಳ ಆರಂಭದೊಂದಿಗೆ 87,000 ವಿದ್ಯಾರ್ಥಿಗಳು ಕೈಗೆಟಕುವ, ಉನ್ನತ ಗುಣಮಟ್ಟದ ಶಿಕ್ಷಣವನ್ನು ಪಡೆಯಲಿದ್ದು, 4,600 ಹೆಚ್ಚುವರಿ ಶಿಕ್ಷಕರು ನೇಮಕಗೊಳ್ಳಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News