×
Ad

ಆಯುಷ್ಮಾನ್ ಭಾರತ್ ಆರೋಗ್ಯ ಕೇಂದ್ರಗಳಿಗೆ 'ಆಯುಷ್ಮಾನ್ ಆರೋಗ್ಯ ಮಂದಿರ' ಎಂದು ಮರುನಾಮಕರಣ

Update: 2023-11-27 14:50 IST

Photo: PTI

ಹೊಸದಿಲ್ಲಿ: ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು 'ಆಯುಷ್ಮಾನ್ ಆರೋಗ್ಯ ಮಂದಿರಗಳು' ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮರು ನಾಮಕರಣವನ್ನು ಕಾರ್ಯಗತಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆದ್ದು, ಈ ವರ್ಷದ ಡಿಸೆಂಬರ್ 31 ರೊಳಗೆ ಹೊಸ ನಾಮಕರಣದೊಂದಿಗೆ ಪ್ರಾಥಮಿಕ ಆರೋಗ್ಯ ಸೌಲಭ್ಯಗಳ ಫೋಟೋಗಳನ್ನು ಕೇಳಿದೆ.

ಎಲ್ಲಾ ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು 'ಆಯುಷ್ಮಾನ್ ಆರೋಗ್ಯ ಮಂದಿರಗಳು' ಎಂದು ಮರುನಾಮಕರಣ ಮಾಡಬೇಕು. ಹಾಗೂ 'ಆರೋಗ್ಯಂ ಪರಮ ಧನಂ' ಎಂಬ ಅಡಿಬರಹವನ್ನು ಹೊಂದಿರಬೇಕು ಎಂದು ಹೆಚ್ಚುವರಿ ಆರೋಗ್ಯ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ಎಲ್.ಎಸ್. ಚಾಂಗ್ಸನ್ ನಿರ್ದೇಶಿಸಿದ್ದಾರೆ.

ಈ ಮರುಬ್ರಾಂಡಿಂಗ್ ಗಾಗಿ ಸರ್ಕಾರವು ಪ್ರತಿ ಕೇಂದ್ರಗಳಿಗೆ ರೂ. 3,000 ಮೀಸಲಿಟ್ಟಿದೆ. 2018 ರಲ್ಲಿ, ಕೇಂದ್ರ ಸರ್ಕಾರವು ಅಂತಹ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ರಚಿಸುವುದಾಗಿ ಹೇಳಿತ್ತು.

ಅಡಿಬರಹವನ್ನು ರಾಜ್ಯದ ಸ್ಥಳೀಯ ಭಾಷೆಗಳಲ್ಲಿ ಲಿಪ್ಯಂತರಗೊಳಿಸಬೇಕಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದ್ದು, ಅಕ್ಷರದ ಶೈಲಿ ಹಾಗೂ ಗಾತ್ರಗಳನ್ನು ಸಹ ನಿರ್ದೇಶಿಸಿದೆ.

ಹಿಂದಿನ ಲೋಗೋಗಳು ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‌ನ ಲೋಗೋಗಳನ್ನು ಉಳಿಸಿಕೊಳ್ಳಬೇಕು ಎಂದು ಆದೇಶ ಪತ್ರದಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News