×
Ad

ತಕ್ಷಣದಿಂದಲೇ ಹಲಾಲ್ ಪ್ರಮಾಣಿತ ಆಹಾರೋತ್ಪನ್ನಗಳ ಮಾರಾಟ ನಿಷೇಧಿಸಿದ ಉತ್ತರ ಪ್ರದೇಶ

Update: 2023-11-18 23:39 IST

Photo : PTI

ಲಕ್ನೊ: ಹಲಾಲ್ ಪ್ರಮಾಣಿತ ಆಹಾರೋತ್ಪನ್ನಗಳ ಮಾರಾಟ ಇಂದಿನಿಂದಲೇ ಉತ್ತರ ಪ್ರದೇಶ ಸರ್ಕಾರ ನಿಷೇಧಿಸಿದೆ. ಈ ಕುರಿತು ಆದೇಶ ಹೊರಡಿಸಿರುವ ಆಹಾರ ಆಯುಕ್ತರು, "ಹಲಾಲ್ ಉತ್ಪನ್ನಗಳ ಉತ್ಪಾದನೆ, ಸರಬರಾಜು ಹಾಗೂ ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ" ಎಂದು ಹೇಳಿದ್ದಾರೆ. ರಫ್ತಿಗಾಗಿನ ಹಲಾಲ್ ಉತ್ಪನ್ನಗಳನ್ನು ಈ ಆದೇಶದಿಂದ ಹೊರಗಿಡಲಾಗಿದೆ ಎಂದು ndtv.com ವರದಿ ಮಾಡಿದೆ.

ಆಹಾರೋತ್ಪನ್ನಗಳ ಹಲಾಲ್ ಪ್ರಮಾಣೀಕರಣವು ಸಮಾನಾತಂತರ ವ್ಯವಸ್ಥೆಯಾಗಿದ್ದು, ಆಹಾರ ಪದಾರ್ಥಗಳ ಗುಣಮಟ್ಟದ ಕುರಿತು ಗೊಂದಲವನ್ನು ಸೃಷ್ಟಿಸುತ್ತದೆ. ಹೀಗಾಗಿ ಈ ಕಾಯ್ದೆಯ ಸೆಕ್ಷನ್ 89ರ ಅಡಿ ಇದು ಊರ್ಜಿತವಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

"ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿರ್ಧರಿಸುವ ಅಧಿಕಾರ ಈ ಕಾಯ್ದೆಯ ಸೆಕ್ಷನ್ 29ರ ಅನ್ವಯ ಕಾಯ್ದೆಯ ಅವಕಾಶಗಳಡಿ ಸೂಕ್ತ ಮಾನದಂಡಗಳನ್ನು ಬಳಸಿ ಪರಿಶೀಲಿಸುವ ಸಂಬಂಧಿತ ಪ್ರಾಧಿಕಾರಗಳು ಹಾಗೂ ಸಂಸ್ಥೆಗಳಿಗೆ ಮಾತ್ರ ಸೇರಿದೆ" ಎಂದೂ ಆದೇಶದಲ್ಲಿ ಹೇಳಲಾಗಿದೆ.

ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಮಾರಾಟವನ್ನು ಹಿಗ್ಗಿಸಿಕೊಳ್ಳಲು ನಕಲಿ ಹಲಾಲ್ ಪ್ರಮಾಣ ಪತ್ರಗಳನ್ನು ಒಂದು ಕಂಪನಿ ಹಾಗೂ ಕೆಲವು ಸಂಸ್ಥೆಗಳು ಬಳಸಿಕೊಳ್ಳುತ್ತಿವೆ ಎಂದು ದಾಖಲಾಗಿದ್ದ ಪ್ರಕರಣವೊಂದನ್ನು ಆಧರಿಸಿ ಈ ಆದೇಶ ಹೊರ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News