×
Ad

ಫೆಲೆಸ್ತೀನ್‌ ಬೆಂಬಲಿಸಿ ಪೋಸ್ಟ್‌ ಮಾಡಿದ ಉತ್ತರ ಪ್ರದೇಶ ಪೊಲೀಸ್‌ ಕಾನ್‌ಸ್ಟೇಬಲ್‌ ಅಮಾನತು

Update: 2023-10-16 12:15 IST

ಸಾಂದರ್ಭಿಕ ಚಿತ್ರ 

ಲಕ್ನೋ: ಇಸ್ರೇಲ್-ಹಮಾಸ್‌ ಸಂಘರ್ಷದ ನಡುವೆ ಫೆಲೆಸ್ತೀನ್‌ಗೆ ಬೆಂಬಲ ವ್ಯಕ್ತಪಡಿಸಿ ಪೋಸ್ಟ್‌ ಮಾಡಿದ ಉತ್ತರ ಪ್ರದೇಶದ ಪೊಲೀಸ್‌ ಕಾನ್‌ಸ್ಟೇಬಲ್‌ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಹಾಗೂ ಅವರ ವಿರುದ್ಧ ಇಲಾಖಾ ತನಿಖೆ ಆರಂಭಿಸಲಾಗಿದೆ.

ಅಮಾನತುಗೊಂಡ ಕಾನ್‌ಸ್ಟೇಬಲ್‌ ಸುಹೈಲ್‌ ಅನ್ಸಾರಿ ಬರೇಲಿ ನಿವಾಸಿಯಾಗಿದ್ದು ಕೆಲ ತಿಂಗಳ ಹಿಂದೆಯಷ್ಟೇ ಲಖೀಂಪುರ್‌ ಖೇರಿಗೆ ನಿಯೋಜನೆಗೊಂಡಿದ್ದರು.

ಕಾನ್‌ಸ್ಟೇಬಲ್‌ ಶೇರ್‌ ಮಾಡಿದ ಪೋಸ್ಟ್‌ ಕುರಿತಂತೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ.

ಇಸ್ರೇಲ್-ಫೆಲೆಸ್ತೀನ್‌ ಸಂಘರ್ಷದ ಕುರಿತಂತೆ ಭಾರತದ ನಿಲುವಿಗೆ ವಿರುದ್ಧವಾಗಿ ಪೋಸ್ಟ್‌ ಮಾಡಿ ಭಾವನೆಗಳನ್ನು ಕೆರಳಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಕಳೆದ ವಾರ ಮುಖ್ಯಮಂತ್ರಿ ಆದಿತ್ಯನಾಥ್‌ ಎಚ್ಚರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News