×
Ad

2013ರ ರಸ್ತೆ ತಡೆ ಪ್ರಕರಣ | ಮಾಜಿ ಕೇಂದ್ರ ಸಚಿವ, ಇತರ 13 ಜನರಿಗೆ ಎರಡು ವರ್ಷ ಶಿಕ್ಷೆ

Update: 2025-09-13 23:26 IST

ಸಾಂದರ್ಭಿಕ ಚಿತ್ರ

ಝಾನ್ಸಿ,ಸೆ.13: ವಿದ್ಯುತ್ ಕಡಿತವನ್ನು ಪ್ರತಿಭಟಿಸಿ 2013ರಲ್ಲಿ ನಡೆದಿದ್ದ ರಸ್ತೆ ತಡೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಹಾಯಕ ಸಚಿವ ಪ್ರದೀಪ್‌ ಜೈನ್‌ ಆದಿತ್ಯ ಮತ್ತು ಇತರ 13 ಜನರಿಗೆ ಇಲ್ಲಿಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯವು ಶುಕ್ರವಾರ ಎರಡು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.

ಆದಾಗ್ಯೂ ಅವರೆಲ್ಲರನ್ನೂ ವೈಯಕ್ತಿಕ ಬಾಂಡ್‌ಗಳ ಮೇಲೆ ಬಿಡುಗಡೆಗೊಳಿಸಲಾಗಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ ಎಂದು ಆರೋಪಿಗಳ ಪರ ವಕೀಲರು ತಿಳಿಸಿದರು.

ಜೂನ್ 11, 2013ರಂದು ಕಾಂಗ್ರೆಸ್‌ನಿಂದ ವಿದ್ಯುತ್ ಸಮಸ್ಯೆಗಳ ವಿರುದ್ಧ ಪರಿಛಾ ಉಷ್ಣ ವಿದ್ಯುತ್ ಸ್ಥಾವರದ ಬಳಿ ಪ್ರತಿಭಟನೆ ಸಂದರ್ಭದಲ್ಲಿ ಜೈನ್ ಕರೆಯ ಮೇರೆಗೆ ಪಕ್ಷದ ಕಾರ್ಯಕರ್ತರು ಝಾನ್ಸಿ-ಕಾನ್ಪುರ ಹೆದ್ದಾರಿಯಲ್ಲಿ ರಸ್ತೆ ತಡೆಯನ್ನು ನಡೆಸಿದ್ದು,ಇದು ಭಾರೀ ವಾಹನ ದಟ್ಟಣೆಗೆ ಕಾರಣವಾಗಿತ್ತು.

ಶಿಕ್ಷೆ ಪ್ರಕಟಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೈನ್‌, ಬುಂದೇಲಖಂಡ್ ನಿವಾಸಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದರು. ಪಕ್ಷದ ಕಾರ್ಯಕರ್ತರಿಗೂ ಶಿಕ್ಷೆಯಾಗಿದ್ದಕ್ಕೆ ಅವರು ನೋವನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News