×
Ad

ಉತ್ತರ ಪ್ರದೇಶ | ಗೋಮಾಂಸ ಸಾಗಾಟದ ಶಂಕೆಯಲ್ಲಿ ನಾಲ್ವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನಕ್ಕೆ ಬೆಂಕಿ ಹಚ್ಚಿದ ಗುಂಪು

Update: 2025-05-25 13:49 IST
Photo credit: X

ಉತ್ತರ ಪ್ರದೇಶ: ಅಲಿಘರ್‌ನಲ್ಲಿ ಗೋ ಮಾಂಸ ಸಾಗಾಟದ ಶಂಕೆಯಲ್ಲಿ ಗುಂಪೊಂದು ನಾಲ್ವರ ಮೇಲೆ ದಾಳಿ ಮಾಡಿ ವಾಹನಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ವರದಿಯಾಗಿದೆ.

ಹದಿನೈದು ದಿನಗಳ ಹಿಂದೆ ಇದೇ ರೀತಿ "ಅಕ್ರಮ ಮಾಂಸ"ದೊಂದಿಗೆ ಗ್ರಾಮಸ್ಥರು ತಡೆದಿದ್ದ ವಾಹನ ಇದಾಗಿದೆ ಎಂದು ಬಜರಂಗದಳದ ಸ್ಥಳೀಯ ನಾಯಕರು ಹೇಳಿಕೊಂಡಿದ್ದಾರೆ. ಆದರೆ ಹದಿನೈದು ದಿನಗಳ ಹಿಂದೆ ಪತ್ತೆಯಾಗಿರುವುದು ಗೋಮಾಂಸವಲ್ಲ, ಎಮ್ಮೆ ಮಾಂಸ ಎಂದು ಪೊಲೀಸರು ಹೇಳಿದ್ದಾರೆ.

ಈ ಕುರಿತು ಎಸ್ಪಿ ಅಮೃತ್ ಜೈನ್ ಪ್ರತಿಕ್ರಿಯಿಸಿ, ʼಉದ್ರಿಕ್ತರ ಗುಂಪೊಂದು ವಾಹನವನ್ನು ತಡೆದು ನಾಲ್ವರು ವಾಹನ ಸವಾರರನ್ನು ಥಳಿಸಿ ವಾಹನಕ್ಕೆ ತೀವ್ರವಾಗಿ ಹಾನಿ ಮಾಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಾಂಸವನ್ನು ವಶಪಡಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಕುರಿತು ಸಂಪೂರ್ಣವಾಗಿ ತನಿಖೆಯನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.

ಎರಡು ವಾರಗಳ ಹಿಂದಿನ ಘಟನೆಯಲ್ಲಿ ಪ್ರಯೋಗಾಲಯ ಪರೀಕ್ಷೆ ಎಮ್ಮೆ ಮಾಂಸ ಎಂದು ದೃಢಪಡಿಸಿದ ನಂತರ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ. ಅವರ ಬಳಿ ಮಾನ್ಯ ದಾಖಲೆಗಳಿತ್ತು ಎಂದು ಜೈನ್ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News