×
Ad

ಶಿಕ್ಷಕಿ ಸೂಚನೆಯಂತೆ ಸಹಪಾಠಿಗಳಿಂದ ಹೊಡೆತ ತಿಂದ ಬಾಲಕನಿಗೆ ರಾತ್ರಿ ನಿದ್ದೆಯಿಲ್ಲ; ಪೋಷಕರ ಆರೋಪ

Update: 2023-08-28 14:10 IST

Photo:NDTV

ಲಕ್ನೋ: ಶಿಕ್ಷಕಿಯ ಸೂಚನೆಯಂತೆ ತನ್ನ ಸಹಪಾಠಿಗಳಿಂದಲೇ ಹೊಡೆತ ತಿಂದ ಮುಸ್ಲಿಂ ಬಾಲಕ ಮನೆಯಲ್ಲಿ ರಾತ್ರಿ ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಹಾಗೂ ತೀವ್ರ ತಳಮಳಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಆತನನ್ನು ಮೀರತ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ಆತನೀಗ ಮನೆಯಲ್ಲಿದ್ದು ಏನೂ ಸಮಸ್ಯೆಯಿಲ್ಲ ಎಂದು ಆತನ ಹೆತ್ತವರು ಹೇಳಿದ್ದಾರೆ.

ಪತ್ರಕರ್ತರ ಸಹಿತ ಹಲವು ಜನರು ಶಾಲೆ ಘಟನೆಯ ಬಗ್ಗೆ ಆತನಲ್ಲಿ ಪ್ರಶ್ನಿಸಿದ್ದರಿಂದ ಆತ ಮಾನಸಿಕವಾಗಿ ಕುಗ್ಗಿದ್ದ ಎಂದು ಆತನ ತಂದೆ ಹೇಳಿದ್ದಾರೆ. ಬಾಲಕ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

ತಮ್ಮ ಮಗನಿಗೆ ಥಳಿಸುವಂತೆ ಇತರ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ ಆರೋಪ ಎದುರಿಸುತ್ತಿರುವ ಶಿಕ್ಷಕಿ ತೃಪ್ತಾ ತ್ಯಾಗಿ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದೂ ಬಾಲಕನ ತಂದೆ ಹೇಳಿದ್ದಾರೆ.

ಬಾಲಕನನ್ನು ಆತನ ಕುಟುಂಬ ಒಪ್ಪಿದರೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ನಡೆದ ಖಬ್ಬುಪುರ್‌ ಗ್ರಾಮದ ಖಾಸಗಿ ಶಾಲೆ ಮುಚ್ಚುವುದಿಲ್ಲ ಎಂದಿನಂತೆ ಕಾರ್ಯಾಚರಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News