×
Ad

ಭಾರತದಾದ್ಯಂತ ಯುಪಿಐ ಸರ್ವರ್ ಡೌನ್ | ಆನ್‌ಲೈನ್‌ ಪಾವತಿ ವ್ಯವಸ್ಥೆಯನ್ನು ಟೀಕಿಸಿದ ಜನರು

Update: 2025-04-12 15:54 IST

ಹೊಸದಿಲ್ಲಿ : ಭಾರತದಾದ್ಯಂತ ಯುಪಿಐ ಸರ್ವರ್ ಡೌನ್ ಆಗಿರುವ ಬಗ್ಗೆ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

Google Pay ಮತ್ತು Paytm ನಂತಹ ಜನಪ್ರಿಯ ಆನ್ಲೈನ್ ಪ್ಲಾಟ್ಫಾಫಾರ್ಮ್‌ಗಳ ಮೂಲಕ ಪಾವತಿಗಳನ್ನು ಮಾಡುವಾಗ ಬಳಕೆದಾರರು ವೈಫಲ್ಯಗಳನ್ನು ಎದುರಿಸಿದರು. ಯುಪಿಐ ಎಂಬುದು ಆರ್‌ಬಿಐ ನಿಯಂತ್ರಿತ ಘಟಕವಾದ ಎನ್ ಪಿಸಿಐ ಅಭಿವೃದ್ಧಿಪಡಿಸಿದ ಮತ್ತು ನಿರ್ವಹಿಸುವ ತ್ವರಿತ ಪಾವತಿ ವ್ಯವಸ್ಥೆಯಾಗಿದೆ.

ಯುಪಿಐ ಸರ್ವರ್ ಡೌನ್ ಹಿನ್ನೆಲೆ ಭಾರತೀಯ ಆನ್‌ಲೈನ್‌ ಪಾವತಿ ವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವ್ಯಂಗ್ಯವಾಡಿದ್ದಾರೆ.

ʼಬಹಳ ವಿಚಿತ್ರವಾದ ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಮೊದಲು UPI ಸರ್ವರ್ ಡೌನ್ ಆಗುತ್ತದೆ. ಬಳಿಕ ಬ್ಯಾಂಕುಗಳು ತಮ್ಮದೇ ಆದ ಡೌನ್ ಟೈಮ್ ಅನ್ನು ಘೋಷಿಸುತ್ತವೆ. ಇದು ಭಾರತದ ಆನ್‌ಲೈನ್‌ ಪಾವತಿʼ ವ್ಯವಸ್ಥೆಯಾಗಿದೆ ಎಂದು ಯುಪಿಐ ಬಳಕೆದಾರರೋರ್ವರು ಟೀಕಿಸಿದರು.

ಪಾವತಿಯ ಸಮಯದಲ್ಲಿ UPI ಕಾರ್ಯನಿರ್ವಹಿಸದಿದ್ದರೆ ಅನುಭವಿಸುವ ಮುಜುಗರದ ಬಗ್ಗೆ ಮತ್ತೋರ್ವರು ಎಕ್ಸ್‌ನಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ʼನಾನು ಬಾಸ್‌ನಂತೆ ಊಟವನ್ನು ಮುಗಿಸಿದೆ, ಆದರೆ UPI ಮೂಲಕ ಪಾವತಿಸಲು ಪ್ರಯತ್ನಿಸಿದಾಗ ಸರ್ವರ್ ಡೌನ್, ಈಗ ನಾನು ಹೊಟ್ಟೆ ತುಂಬಿಸಿಕೊಂಡು ಕ್ರಿಮಿನಲ್‌ನಂತೆ ಹೋಟೆಲ್‌ನಲ್ಲಿ ಕುಳಿತಿದ್ದೇನೆʼ ಎಂದು ಎಕ್ಸ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News