×
Ad

ಅಪಘಾತದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವನ್ನು ಪೊಲೀಸ್‌ ಅಧಿಕಾರಿ ಅಣಕಿಸಿದ ಪ್ರಕರಣ: ಆಕ್ಷೇಪ ವ್ಯಕ್ತಪಡಿಸಿದ ಭಾರತೀಯ ಕಾನ್ಸುಲೇಟ್‌ ಜನರಲ್‌

Update: 2023-09-14 15:47 IST

 ಜಾಹ್ನವಿ ಕಂಡುಲಾ (Photo: Twitter)

ಹೊಸದಿಲ್ಲಿ: ಅಮೆರಿಕಾದ ಸಿಯಾಟ್ಲ್‌ ನಗರದಲ್ಲಿ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾಳಿಗೆ ಪೊಲೀಸ್‌ ವಾಹನವೊಂದು ಢಿಕ್ಕಿ ಹೊಡೆದು ಆಕೆ ಮೃತಪಟ್ಟ ಎಂಟು ತಿಂಗಳ ನಂತರ ಹೊರಬಿದ್ದಿರುವ ವೀಡಿಯೋವೊಂದರಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಆಕೆಯ ಸಾವನ್ನು ಅಣಕಿಸುವುದು ಕಾಣಿಸಿರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ ಸ್ಯಾನ್‌ ಫ್ರಾನ್ಸಿಸ್ಕೋದ ಕಾನ್ಸುಲೇಟ್‌ ಜನರಲ್‌ ಆಫ್‌ ಇಂಡಿಯಾ ಕೂಡ ಇದಕ್ಕೆ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.

“ಇದು ತೀರಾ ಕಳವಳಕಾರಿ, ನಾವು ಈ ವಿಚಾರವನ್ನು ಸಿಯಾಟ್ಲ್‌ ಮತ್ತು ವಾಷಿಂಗ್ಟನ್‌ನ ಸಂಬಂಧಿತ ಅಧಿಕಾರಿಗಳು ಹಾಗೂ ವಾಷಿಂಗ್ಟನ್‌ ಡಿಸಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಘಟನೆಯ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ,” ಎಂದು ಕಾನ್ಸುಲೇಟ್‌ ಜನರಲ್‌ ಆಫ್‌ ಇಂಡಿಯಾ ಹೇಳಿದ್ದಾರೆ.

ಘಟನೆ ಈ ವರ್ಷದ ಜನವರಿ 23ರಂದು ಜಾಹ್ನವಿ ರಸ್ತೆ ದಾಟುತ್ತಿದ್ದಾಗ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News