×
Ad

ಅಮೆರಿಕ ಎಚ್‍1ಬಿ ವೀಸಾಗೆ ಒಂದು ಲಕ್ಷ ಡಾಲರ್ ಶುಲ್ಕ | ಮೋದಿಗೆ ಎಂತಹ ಅದ್ಭುತ ಉಡುಗೊರೆ: ವ್ಯಂಗ್ಯವಾಡಿದ ಸೌರಭ್ ಭಾರದ್ವಾಜ್

Update: 2025-09-20 18:26 IST

ಸೌರಭ್ ಭಾರದ್ವಾಜ್ |PC : ANI 

ಹೊಸದಿಲ್ಲಿ: ಎಚ್‍1ಬಿ ವೀಸಾ ಅರ್ಜಿಗೆ ಅಮೆರಿಕ ಒಂದು ಲಕ್ಷ ಡಾಲರ್ (88,09,180 ರೂಪಾಯಿ) ಶುಲ್ಕ ವಿಧಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿಯನ್ನು ಛೇಡಿಸಿರುವ ಆಮ್ ಆದ್ಮಿ ಪಕ್ಷದ ದಿಲ್ಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್, ಭಾರತೀಯರನ್ನು ಮರಳಿ ಭಾರತಕ್ಕೆ ಮರಳಿ ಕಳಿಸುವ ಮೂಲಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಉಡುಗೊರೆ ನೀಡಿದ್ದು, ವಿಶ್ವ ಗುರುವಿನ ಅವಧಿಗೆ ಸಾಕ್ಷಿಯಾಗಲು ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ನಿರ್ದಿಷ್ಟ ವಲಸಿಗ ಕಾರ್ಮಿಕರಲ್ಲದವರಿಗೆ ಪ್ರವೇಶ ನಿರ್ಬಂಧ” ಎಂಬ ಅಧ್ಯಕ್ಷೀಯ ಆದೇಶಕ್ಕೆ ಸಹಿ ಮಾಡುತ್ತಿರುವ ತುಣುಕನ್ನು ಅವರು ಹಂಚಿಕೊಂಡಿದ್ದಾರೆ.

“ಅಮೆರಿಕದಲ್ಲಿ ಕೆಲಸ ಮಾಡುತ್ತಾ ಡಾಲರ್ ಗಳನ್ನು ಸಂಪಾದಿಸುತ್ತಿರುವವರು ಭಾರತ ವಿಶ್ವ ನಾಯಕನಾಗಿದೆ ಎಂದು ಹೇಳುತ್ತಿದ್ದರು. ಇದೀಗ ಅಂತಹ ಎಲ್ಲ ಜನರನ್ನೂ ಭಾರತಕ್ಕೆ ವಾಪಸು ಕಳಿಸಿರುವ ಡೊನಾಲ್ಡ್ ಟ್ರಂಪ್, ಅವರೆಲ್ಲ ಭಾರತದಲ್ಲೇ ಉಳಿದುಕೊಂಡು ವಿಶ್ವಗುರುವಿನ ಅವಧಿಯನ್ನು ಆನಂದಿಸುವ ಅವಕಾಶ ನೀಡಿದ್ದಾರೆ. ಟ್ರಂಪ್ ರ ಸ್ನೇಹಿತ ಮೋದಿಗೆ ಇದಕ್ಕಿಂತ ಅದ್ಭುತ ಉಡುಗೊರೆ ಮತ್ತೇನಿರಲು ಸಾಧ್ಯ? ಎಲ್ಲ ಆತ್ಮೀಯರೂ ಮನೆಗೆ ಮರಳುತ್ತಿದ್ದಾರೆ” ಎಂದು ವ್ಯಂಗ್ಯವಾಗಿ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

ಶುಕ್ರವಾರ “ನಿರ್ದಿಷ್ಟ ವಲಸಿಗ ಕಾರ್ಮಿಕರಲ್ಲದವರಿಗೆ ಪ್ರವೇಶ ನಿರ್ಬಂಧ” ಎಂಬ ಹೊಸ ಅಧ್ಯಕ್ಷೀಯ ಆದೇಶಕ್ಕೆ ಸಹಿ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರತಿ ಎಚ್‍1ಬಿ ವೀಸಾ ಅರ್ಜಿಗೆ ವಾರ್ಷಿಕ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸಿದ್ದಾರೆ. ಈ ಉಪಕ್ರಮ ಅಮೆರಿಕದಲ್ಲಿನ ಭಾರತೀಯ ಟೆಕ್ಕಿಗಳಲ್ಲಿ ಕಳವಳವನ್ನುಂಟು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News