ಉತ್ತರ ಪ್ರದೇಶ: 13 ವರ್ಷದ ಬಾಲಕಿಯ ಅಪಹರಿಸಿ ಅತ್ಯಾಚಾರ; ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ
ಬಾಲಿಯಾ: ಉತ್ತರಪ್ರದೇಶದ ಬಾಲ್ಲಿಯಾ ಜಿಲ್ಲೆಯಲ್ಲಿ 13 ವರ್ಷ ವಯಸ್ಸಿನ ದುಷ್ಕರ್ಮಿಯೊಬ್ಬ ಬಾಲಕಿಯೊಬ್ಬಳನ್ನು ಅಪಹರಿಸಿ, ಹೈದರಾಬಾದ್‌ಗೆ ಕೊಂಡೊಯ್ದು, ಅಲ್ಲಿ ಆಕೆಯ ಮೇಲೆ ಸುಮಾರು ಒಂದು ವಾರ ಕಾಲ ಅತ್ಯಾಚಾರವವೆಸಗಿದ ಘಟನೆ ನಡೆದಿರುವುದಾಗಿ ಉತ್ತರಪ್ರದೇಶ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಾಲ್ಲಿಯಾದಲ್ಲಿರುವ ಮಣಿಯಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರದೇಶದಿಂದ ಸಂತ್ರಸ್ತ ಬಾಲಕಿಯನ್ನು ನವೆಂಬರ್ 25ರಂದು ರಕ್ಷಿಸಲಾಗಿದೆ. ಆಕೆಯನ್ನು ಅಪಹರಿಸಿದ್ದನೆನ್ನಲಾದ 19 ವರ್ಷ ವಯಸ್ಸಿನ ಯುವಕನನ್ನು ನವೆಂಬರ್ 27ಪರಂದು ಸ್ಥಳೀಯ ಬಸ್‌ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದ ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಬಾಲಕಿಯು ವಾಸವಾಗಿರುವ ಪ್ರದೇಶದಲ್ಲಿ ಆಗಾಗ್ಗೆ ವಾಸ್ತವ್ಯವಿರುತ್ತಿದ್ದನೆಂದು ಅವರು ಹೇಳಿದ್ದಾರೆ.
ನವೆಂಬರ್ 18ರಂದು ಬಾಲಕಿಯನ್ನು ಆಪಹರಿಸಲಾಗಿತ್ತು. ಆಕೆಯ ತಂದೆ ದೂರು ನೀಡಿದ ಹಿನ್ನೆಲೆಯಲ್ಲಿ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಲಾಗಿತ್ತು. ಆನಂತರ ಬಾಲಕಿಯನ್ನು ಪತ್ತೆಹಚ್ಚಲು ತಂಡಗಳನ್ನು ನಿಯೋಜಿಸಲಾಗಿತ್ತು.
ಆರೋಪಿಯು ತನ್ನನ್ನು ಅಪಹರಿಸಿ ಹೈದರಾಬಾದ್‌ಗೆ ಕೊಂಡೊಯ್ದು, ಅಲ್ಲಿ ಸುಮಾರು ಒಂದು ವಾರ ಕಾಲ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಸಂತ್ರಸ್ತ ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆಂದು ಮಣಿಯಾರ್ ಪೊಲೀಸ್ ಠಾಣಾಧಿಕಾರಿ ಮನತೋಷ್‌ಸಿಂಗ್ ತಿಳಿಸಿದ್ದಾರೆ.
ಬಾಲಕಿಯ ಹೇಳಿಕೆಯ ಆಧಾರದಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 376(ಅತ್ಯಾಚಾರ ಪ್ರಕರಣ) ಹಾಗೂ ಪೋಸ್ಕೊ ಕಾಯ್ದೆಯ ವಿವಿಧ ಸೆಕ್ಷನ್‌ಗಳನ್ನು ಕೂಡಾ ಪ್ರಕರಣದಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.