×
Ad

ಬಾಲಕಿಯ ಅಪಹರಣ-ಸಾಮೂಹಿಕ ಅತ್ಯಾಚಾರ | ಉತ್ತರ ಪ್ರದೇಶ ಬಿಜೆಪಿ ಶಾಸಕನ ಸೋದರಳಿಯ, ಸಹಚರರ ಸೆರೆ

Update: 2025-06-18 21:22 IST

ಸಾಂದರ್ಭಿಕ ಚಿತ್ರ | PC : freepik.com

ಅಮೇಥಿ: ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರದ ಆರೋಪದಲ್ಲಿ ಬಿಜೆಪಿ ಶಾಸಕನ ಸೋದರಳಿಯ ಮತ್ತು ಇತರ ಇಬ್ಬರನ್ನು ಪೋಲಿಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಶಾಸಕ ಸುರೇಶ್ ಪಾರ್ಸಿಯವರ ಸೋದರಳಿಯ ರವಿಕುಮಾರ್, ಆತನ ಸಹಚರರಾದ ಬಾಬಾದೀನ್ ಮತ್ತು ರಾಮಬಚನ್ ಬಂಧಿತ ಆರೋಪಿಗಳಾಗಿದ್ದಾರೆ.

ರವಿಕುಮಾರ ಮತ್ತು ಆತನ ಸಹಚರರು ಜೂ.7ರಂದು ಮೋಹನಗಂಜ್ ಪೋಲಿಸ್ ಠಾಣಾ ವ್ಯಾಪ್ತಿಯ ಗ್ರಾಮದಿಂದ 16ರ ಹರೆಯದ ತನ್ನ ಪುತ್ರಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.

ಬಾಲಕಿ ಜೂ.8ರಂದು ರಾಯಬರೇಲಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಳು. ಬಾಲಕಿಯು ಜೂ.16ರಂದು ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.

‘ರಾಜಿಗೆ ಒಪ್ಪಿಕೊಳ್ಳುವಂತೆ ಪೋಲಿಸರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವರು ಪ್ರಕರಣದಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಅವರು ಬಿಜೆಪಿ ನಾಯಕನ ಒತ್ತಡದಡಿ ಕೆಲಸ ಮಾಡುತ್ತಿದ್ದಾರೆ. ನನ್ನ ಮಗಳ ಮೇಲೆ ಅತ್ಯಾಚಾರ ನಡೆದಿದೆ ’ ಎಂದು ಬಾಲಕಿಯ ತಾಯಿ ಜೂ.14ರಂದು ಆರೋಪಿಸಿದ್ದರು.

ಪ್ರಮುಖ ಆರೋಪಿ ರವಿಕುಮಾರ ಗ್ರಾಮದ ಮುಖ್ಯಸ್ಥ ರಮೇಶ ಪುತ್ರನಾಗಿದ್ದಾನೆ.

ಪೋಲಿಸರು ಆರಂಭದಲ್ಲಿ ಮೂವರು ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು,ಆದರೆ ಅವರ ಮೇಲೆ ಸಾಮೂಹಿಕ ಅತ್ಯಾಚಾರದ ಆರೋಪ ಮತ್ತು ಪೊಕ್ಸೊ ಕಾಯ್ದೆಯ ಕಲಮ್‌ಗಳನ್ನು ಹೇರಿರಲಿಲ್ಲ. ಆರೋಪಗಳನ್ನು ಮಂಗಳವಾರವಷ್ಟೇ ಸೇರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News