ಉತ್ತರ ಪ್ರದೇಶ | ಯುವಕನ ಥಳಿಸಿ ಹತ್ಯೆ
Update: 2025-08-31 20:35 IST
ಮುಝಪ್ಫರ್ ನಗರ್, ಆ. 31: ಹುಲ್ಲು ವ್ಯಾಪಾರಿಯೋರ್ವರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಈ ಘಟನೆ ಕೆರಾಟು ಗ್ರಾಮದಲ್ಲಿ ಶನಿವಾರ ನಡೆದಿದೆ.
‘‘ಅಂಕುಶ್ ಕುಮಾರ್ (27) ಹುಲ್ಲು ಖರೀದಿಸಲು ಮುಝಪ್ಫರ್‌ನಗರದ ತನ್ನ ನಾಗ್ಲಾ ಗ್ರಾಮದಿಂದ ಕೆರಾಟುಗೆ ತೆರಳಿದ್ದರು’’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಅನಂತರ ಗಾಯಗೊಂಡ ಅಂಕುಶ್ ಕುಮಾರ್ ಮೃತದೇಹ ಮೀರತ್-ಕರ್ನಾಲ್ ಹೆದ್ದಾರಿಯ ರಸ್ತೆ ಬದಿಯ ದಾಬಾ ಸಮೀಪ ಪತ್ತೆಯಾಯಿತು ಎಂದು ಅವರು ತಿಳಿಸಿದ್ದಾರೆ.
ಮೃತನ ಕುಟುಂಬದ ಸದಸ್ಯರು ಸಲ್ಲಿಸಿದ ದೂರಿನಲ್ಲಿ ಅಂಕುಶ್ ಕುಮಾರ್ ನನ್ನು ವಿನಾ ಕಾರಣ ಥಳಿಸಿ ಹತ್ಯೆಗೈಯಲಾಗಿದೆ ಎಂದು ಆರೋಪಿಸಲಾಗಿದೆ.
ಕುಟುಂಬದ ಸದಸ್ಯರು ಸಲ್ಲಿಸಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.