ಉತ್ತರ ಪ್ರದೇಶ : 5 ವರ್ಷದ ಬಾಲಕಿಗೆ 10ನೇ ತರಗತಿ ವಿದ್ಯಾರ್ಥಿಯಿಂದ ಲೈಂಗಿಕ ಕಿರುಕುಳ
Update: 2025-10-06 21:18 IST
ಸಾಂದರ್ಭಿಕ ಚಿತ್ರ | Photo Credit : freepik.com
ಲಕ್ನೋ,ಅ. 6: ಕ್ಯಾಂಡಿ ನೀಡುವುದಾಗಿ ಆಮಿಷ ಒಡ್ಡಿ 5 ವರ್ಷದ ಬಾಲಕಿಗೆ 10ನೇ ತರಗತಿ ವಿದ್ಯಾರ್ಥಿ ಲೈಂಗಿಕ ಕಿರುಕುಳ ನೀಡಿದ ಘಟನೆ ಪ್ರಯಾಗ್‌ರಾಜ್‌ನ ಮವು ಐಮಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಬಾಲಕನನ್ನು ರವಿವಾರ ಬೆಳಗ್ಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಚಾರಣೆ ಸಂದರ್ಭ ಬಾಲಕ ‘‘ತಾನು ಮೊಬೈಲ್‌ನಲ್ಲಿ ನೀಲಿ ಚಿತ್ರಗಳನ್ನು ಆಗಾಗ ವೀಕ್ಷಿಸುತ್ತಿದ್ದೆ. ಅದು ಈ ಕೃತ್ಯ ಎಸಗಲು ಪ್ರೇರೇಪಿಸಿತು’’ ಎಂದು ಹೇಳಿದ್ದಾನೆ.
ಆರೋಪಿ ಬಾಲಕ ಕಸ್ಟಡಿಯಲ್ಲಿ ಇದ್ದಾನೆ. ಆತನ ವಿರುದ್ಧ ಪೊಕ್ಸೊ ಸೇರಿದಂತೆ ಇತರ ಕಾಯ್ದೆಯ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮವು ಐಮಾ ಪೊಲೀಸ್ ಠಾಣೆಯ ಉಸ್ತುವಾರಿ ಪಂಕಜ್ ಅವಸ್ಥಿ ತಿಳಿಸಿದ್ದಾರೆ.