×
Ad

ಉತ್ತರ ಪ್ರದೇಶ: ದೂರು ನೀಡಲು ಬಂದಿದ್ದ ದಲಿತ ಮಹಿಳೆಗೆ ಡ್ರಗ್ಸ್ ನೀಡಿ ಕಾರಿನಲ್ಲಿ ಅತ್ಯಾಚಾರವೆಸಗಿದ ಪೊಲೀಸ್

Update: 2023-09-27 22:32 IST

ಸಾಂದರ್ಭಿಕ ಚಿತ್ರ

 

ಪ್ರಯಾಗರಾಜ್: ದೂರು ನೀಡಲು ತನ್ನ ಬಳಿ ಬಂದಿದ್ದ ದಲಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಇಲ್ಲಿಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಓರ್ವನನ್ನು ಇಲಾಖೆಯು ಸೇವೆಯಿಂದ ಅಮಾನತುಗೊಳಿಸಿದೆ.

ಸೆ.21ರಂದು ಜಂಘಾಯಿ ಔಟ್ಪೋಸ್ಟ್ ನ ಪಿಎಸ್ಐ ಸುಧೀರ್ ಕುಮಾರ್ ಪಾಂಡೆ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.

ಪಾಂಡೆ ಸದ್ಯ ತಲೆಮರೆಸಿಕೊಂಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಮಹಿಳೆಗೆ ಕೆಲವು ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದರು ಮತ್ತು ಜೀವ ಬೆದರಿಕೆಗಳನ್ನು ಒಡ್ಡುತ್ತಿದ್ದರು. ಹೀಗಾಗಿ ಆಕೆ ಜಂಘಾಯಿ ಔಟ್ಪೋಸ್ಟ್ ಗೆ ತೆರಳಿ ದೂರು ಸಲ್ಲಿಸಿದ್ದರು.

ಸೆ.21ರಂದು ಮಹಿಳೆಯನ್ನು ಔಟ್ಪೋಸ್ಟ್ ಗೆ ಕರೆಸಿಕೊಂಡಿದ್ದ ಪಾಂಡೆ ಆರೋಪಿಗಳನ್ನು ಬಂಧಿಸುವ ನೆಪದಲ್ಲಿ ಕಾರಿನಲ್ಲಿ ಆಕೆಯನ್ನು ಕರೆದೊಯ್ದಿದ್ದ. ಮಾರ್ಗಮಧ್ಯೆ ಮಾದಕ ದ್ರವ್ಯಗಳನ್ನು ಬೆರೆಸಿದ ತಂಪು ಪಾನೀಯವನ್ನು ಕುಡಿಯಲು ನೀಡಿದ್ದ. ಆಕೆ ಪ್ರಜ್ಞೆಯನ್ನು ಕಳೆದುಕೊಂಡಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News