ಉತ್ತರಪ್ರದೇಶ: ದಲಿತನಿಗೆ ಹಲ್ಲೆ ನಡೆಸಿ ಚಪ್ಪಲಿ ನೆಕ್ಕುವಂತೆ ಮಾಡಿದ ಘಟನೆ
Photo : thewire.in
ಹೊಸದಿಲ್ಲಿ: ಉತ್ತರಪ್ರದೇಶದ ಸೋನಭದ್ರಾ ಜಿಲ್ಲೆಯಲ್ಲಿ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ದಲಿತನೊಬ್ಬನ ಮೇಲೆ ಹಲ್ಲೆ ನಡೆಸಿ, ತನ್ನ ಚಪ್ಪಲಿಗಳನ್ನು ನೆಕ್ಕುವಂತೆ ಮಾಡಿದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು (NCSC) ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಎನ್‌ಸಿಎಸ್‌ಸಿ ಚೇರ್ಮನ್ ವಿಜಯ ಸಂಪ್ಲಾ ಅವರ ಆದೇಶದ ಮೇಲೆ ಈ ನೋಟಿಸ್ ಜಾರಿಗೊಳಿಸಲಾಗಿದೆ. ಜುಲೈ 17ರೊಂದಿಗೆ ಈ ಬಗ್ಗೆ ಕಾರ್ಯಾನುಷ್ಠಾನ ವರದಿಯನ್ನು ಸಲ್ಲಿಸುವಂತೆ ಆಯೋಗವು ಉತ್ತರಪ್ರದೇಶ ಸರಕಾರವನ್ನು ಕೋರಿದೆ.
ಇಲೆಕ್ಟ್ರಿಕಲ್ ವಯರಿಂಗ್ ನಲ್ಲಿ ಲೋಪದೋಷವಾಗಿರುವುದನ್ನು ತಪಾಸಣೆ ಮಾಡಿದ ದಲಿತ ಯುವಕನ ಮೇಲೆ ರೋಷಗೊಂಡ ಉತ್ತರಪ್ರದೇಶ ವಿದ್ಯುತ್ಶಕ್ತಿ ಇಲಾಖೆಯ ಗುತ್ತಿಗೆ ಉದ್ಯೋಗಿ ತೇಜಬಲಿ ಸಿಂಗ್ ಪಟೇಲ್ ಎಂಬಾತ ಹಲ್ಲೆನಡೆಸಿದ್ದ ಮತ್ತು ಬಲವಂತದಿಂದ ತನ್ನ ಚಪ್ಪಲಿಯನ್ನು ನೆಕ್ಕುವಂತೆ ಮಾಡಿದ ದೃಶ್ಯದ ವಿಡಿಯೋ ವೈರಲ್ ಆಗಿತ್ತು.
ಈ ಅಮಾನವೀಯ ಘಟನೆಗೆ ಸಂಬಂಧಿಸಿ ಎನ್‌ಸಿಎಸ್‌ಸಿ ಯು ಮಾಹಿತಿಯನ್ನು ಪಡೆದುಕೊಂಡಿತ್ತು.