×
Ad

ಉತ್ತರ ಪ್ರದೇಶ: ಒಂದೇ ಕುಟುಂಬದ ಐದು ಮಂದಿ ಉಸಿರುಗಟ್ಟಿ ಮೃತ್ಯು

Update: 2024-01-10 08:13 IST

Photo: twitter.com/jollymampilly

ಲಕ್ನೋ: ನಿದ್ದೆ ಮಾಡುತ್ತಿದ್ದ ಒಂದೇ ಕುಟುಂಬದ ಐದು ಮಂದಿ ಉಸಿರುಗಟ್ಟಿ ಮೃತಪಟ್ಟಿದ್ದು, ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹೊ ಜಿಲ್ಲೆಯಿಂದ ವರದಿಯಾಗಿದೆ.

ಆಮ್ಲಜನಕದ ಕೊರತೆ ಇವರ ಸಾವಿಗೆ ಕಾರಣವಿರಬೇಕು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಮನೆಯ ಒಳಗಡೆ ಇದ್ದಿಲಿನ ಸಹಾಯದಿಂದ ಕಂಚಿನ ಕೆಲಸ ಮಾಡುತ್ತಿದ್ದುದೇ ಆಕಸ್ಮಿಕ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಸೋಮವಾರ ರಾತ್ರಿ ಮಲಗಿದ್ದ ಏಳು ಮಂದಿ ಮಂಗಳವಾರ ಸಂಜೆ ವರೆಗೂ ಬಾಗಿಲು ತೆರೆಯದಿದ್ದಾಗ ಸಂದೇಹಗೊಂಡ ನೆರೆಯವರು ಬಾಗಿಲು ಒಡೆದು ಒಳ ನುಗ್ಗಿದಾಗ ಈ ದೃಶ್ಯ ಕಂಡುಬಂದಿದೆ.

ಇದು ರಹಿಝುದ್ದೀನ್ ಎಂಬವರಿಗೆ ಸೇರಿದ ಮನೆಯಾಗಿದ್ದು, ಅವರ ಮೂವರು ಮಕ್ಕಳು ಹಾಗೂ ಅವರ ಸಂಬಂಧಿಕರ ಇಬ್ಬರು ಮಕ್ಕಳು ಘಟನೆಯಲ್ಲಿ ಮೃತಪಟ್ಟಿದ್ದಾರೆ. ರಹಿಝುದ್ದೀನ್ ಅವರ ಪತ್ನಿ ಹಾಗೂ ಸಹೋದರನ ಸ್ಥಿತಿ ಚಿಂತಾಜನಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News