×
Ad

ಉತ್ತರ ಪ್ರದೇಶ | ಯುವತಿಯ ಸಾಮೂಹಿಕ ಅತ್ಯಾಚಾರ

Update: 2025-04-16 21:05 IST

ಸಾಂದರ್ಭಿಕ ಚಿತ್ರ | PC : freepik.com

ಹಮೀರ್‌ಪುರ: ಇಪ್ಪತ್ತೆರೆಡು ವರ್ಷದ ಯುವತಿಯನ್ನು ಐವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಸದರ್ ಕೊತವಾಲಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಸದರ್ ಕೊತವಾಲಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ತಂದೆ ಸಲ್ಲಿಸಿದ ದೂರಿನಲ್ಲಿ ಯುವತಿ ಜಾನುವಾರುಗಳ ಕೊಟ್ಟಿಗೆ ಸಮೀಪ ಇದ್ದ ಶೌಚಾಲಯಕ್ಕೆ ಹೋಗಿದ್ದಳು. ಈ ಸಂದರ್ಭ ಇಬ್ಬರು ಸಹೋದರರಾದ ವಾಸು, ಆಶು ಹಾಗೂ ಚೋಟು, ಇತರ ಇಬ್ಬರು ಸೇರಿದಂತೆ ಐವರು ಯುವಕರು ಆಕೆಯನ್ನು ಹೊಲಕ್ಕೆ ಎಳೆದೊಯ್ದರು. ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಹೇಳಿದೆ.

ಯುವತಿ ತುಂಬಾ ಸಮಯದ ವರೆಗೆ ಬರದೇ ಇದ್ದಾಗ ಕುಟುಂಬದ ಸದಸ್ಯರು ಆಕೆಯ ಹುಡುಕಾಟ ನಡೆಸಿತು. ತೀವ್ರ ಹುಡುಕಾಟದ ಬಳಿಕ ಆಕೆ ಹೊಲವೊಂದರಲ್ಲಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾದಳು. ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆಯನ್ನು ಪ್ರಶ್ನಿಸಿದಾಗ ಆಕೆ ತನ್ನ ಮೇಲೆ ನಡೆದ ಕ್ರೂರ ಲೈಂಗಿಕ ದೌರ್ಜನ್ಯವನ್ನು ಕುಟುಂಬಕ್ಕೆ ತಿಳಿಸಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ.

ಆಕೆ ಮೂವರು ಯುವಕರ ಹೆಸರನ್ನು ಕೂಡ ಬಹಿರಂಗಪಡಿಸಿದ್ದಾಳೆ ಎಂದು ಆಕೆಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.

ದೂರಿನ ಆಧಾರದಲ್ಲಿ ಪೊಲೀಸರು ಇಬ್ಬರು ಅನಾಮಿಕರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ್ದಾರೆ ಎಂದು ಸದರ್ ಸರ್ಕಲ್ ಅಧಿಕಾರಿ ರಾಜೇಶ್ ಕಮಲ್ ತಿಳಿಸಿದ್ದಾರೆ.

‘‘ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಆರೋಪಿಗಳನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ಆರಂಭಿಸಲಾಗಿದೆ. ನಾವು ಶೀಘ್ರದಲ್ಲಿ ಅವರನ್ನು ಬಂಧಿಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News