×
Ad

ಉತ್ತರಪ್ರದೇಶ | ʼಅಕ್ರಮ ನಿರ್ಮಾಣʼವೆಂದು 180 ವರ್ಷ ಹಳೆಯ ಮಸೀದಿಯ ಗೋಡೆಯನ್ನು ಕೆಡವಿದ ಜಿಲ್ಲಾಡಳಿತ

Update: 2024-12-10 17:45 IST

PC : PTI 

ಲಕ್ನೋ: ಉತ್ತರಪ್ರದೇಶದ ಕೆಲವೆಡೆ ಮಸೀದಿಗಳ ಮಾಲಿಕತ್ವದ ಬಗ್ಗೆ ವಿವಾದ ಭುಗಿಲೆದ್ದಿರುವ ಮಧ್ಯೆ ಫತೇಪುರ ಜಿಲ್ಲೆಯಲ್ಲಿ ಮಂಗಳವಾರ 180 ವರ್ಷಗಳಷ್ಟು ಹಳೆಯದಾದ ಮಸೀದಿಯ ಕೆಲ ಭಾಗವನ್ನು ʼಅಕ್ರಮವಾಗಿ ನಿರ್ಮಿಸಲಾಗಿದೆʼ ಎಂದು ಕೆಡವಲಾಗಿದೆ.

ವರದಿಗಳ ಪ್ರಕಾರ, ಫತೇಪುರ ಜಿಲ್ಲೆಯ ಲಾಲೌಲಿ ಪಟ್ಟಣದಲ್ಲಿರುವ ನೂರಿ ಜಾಮಾ ಮಸೀದಿಯ ಹಿಂಭಾಗವನ್ನು ಪೊಲೀಸರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಬುಲ್ಡೋಜರ್‌ ಗಳ ಸಹಾಯದಿಂದ ಕೆಡವಲಾಗಿದೆ. ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮಸೀದಿಯ ಹಿಂಬದಿ ಗೋಡೆ ನಿರ್ಮಿಸಲಾಗಿತ್ತು. ರಸ್ತೆ ವಿಸ್ತರಣೆಯಾಗುತ್ತಿದ್ದಂತೆ ಅಕ್ರಮ ಗೋಡೆಯನ್ನು ಕೆಡವಲಾಗಿದೆ ಎಂದು ಫತೇಪುರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅತಿಕ್ರಮಣ ಭೂಮಿಯಲ್ಲಿರುವ ಕಟ್ಟಡವನ್ನು ಕೆಡವುವಂತೆ ಸೂಚಿಸಿ ಆಗಸ್ಟ್ ಮತ್ತು ಸೆಪ್ಟೆಂಬರ್‌ ನಲ್ಲಿ ಮಸೀದಿ ಉಸ್ತುವಾರಿಗೆ ಎರಡು ಬಾರಿ ನೋಟಿಸ್ ಕಳುಹಿಸಲಾಗಿದೆ. ಮಸೀದಿ ಆಡಳಿತವು ಒಂದು ತಿಂಗಳ ಕಾಲಾವಕಾಶವನ್ನು ಕೋರಿದ್ದರು. ಆದರೆ ಮಸೀದಿ ಸಮಿತಿಯು ನೀಡಿದ್ದ ಅವಧಿಯಲ್ಲಿ ಮಸೀದಿಯನ್ನು ಕೆಡವಲು ವಿಫಲವಾದ ಕಾರಣ ಅಕ್ರಮ ಭಾಗವನ್ನು ಕೆಡವಲಾಗಿದೆ ಎಂದು ಹೇಳಿದ್ದಾರೆ.

ಧ್ವಂಸ ಪ್ರಕ್ರಿಯೆಗೆ ತಡೆ ಕೋರಿ ಮಸೀದಿ ಸಮಿತಿಯು ಅಲಹಾಬಾದ್ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 13ಕ್ಕೆ ನಿಗದಿಪಡಿಸಿತ್ತು. ಆದರೆ ಇದೀಗ ವಿಚಾರಣೆಗೆ ಮೊದಲೇ ಮಸೀದಿ ಭಾಗವವನ್ನು ಕೆಡವಲಾಗಿದೆ. ಮಸೀದಿಯು 180 ವರ್ಷಗಳಷ್ಟು ಹಳೆಯದಾಗಿದೆ. ಹಿಂಬದಿಯ ಗೋಡೆಗಳನ್ನು ಕೆಡವುದರಿಂದ ಮಸೀದಿಗೆ ಹಾನಿಯಾಗಲಿದೆ, ನ್ಯಾಯಾಲಯದ ವಿಚಾರಣೆಗಾಗಿ ಕಾಯುವಂತೆ ನಾವು ಮನವಿ ಮಾಡಿದ್ದೆವು, ಆದರೆ ನಮ್ಮ ಮಾತನ್ನು ಕೇಳಲಿಲ್ಲ ಎಂದು ಮಸೀದಿಯ ಉಸ್ತುವಾರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News