×
Ad

ಉತ್ತರ ಪ್ರದೇಶ: ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿದ ಮೂವರು ದುಷ್ಕರ್ಮಿಗಳ ಬಂಧನ

Update: 2024-01-23 23:03 IST

 ಶಹಜಾನ್ಪುರಮಸೀದಿಯೊಂದರ ಮೇಲಿದ್ದ ಧಾರ್ಮಿಕ  ಧ್ವಜವನ್ನು ತೆರವುಗೊಳಿಸಿ, ಅದರ ಜಾಗದಲ್ಲಿ ಕೇಸರಿ ಧ್ವಜವನ್ನು ಸ್ಥಾಪಿಸಿದ ಆರೋಪದಲ್ಲಿ  ಮೂವರು ದುಷ್ಕರ್ಮಿಗಳನ್ನು ಉತ್ತರಪ್ರದೇಶದ ಶಹಜಾನ್ಪುರ ಪೊಲೀಸರು ಬಂಧಿಸಿದ್ದಾರೆ.

‘‘ ರಾಮಚಂದ್ರ ಮಿಶನ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಲಾಲ್ಬಾಗ್ ಪ್ರದೇಶದಲ್ಲಿನ ಮಸೀದಿಯೊಂದರಲ್ಲಿ ಕೆಲವು ದುಷ್ಕರ್ಮಿಗಳು ಸೋಮವಾರ ರಾತ್ರಿ ಮಸೀದಿಯ ಗೋಪುರವನ್ನು ಹತ್ತಿ ಅಲ್ಲಿದ್ದ ಹಸಿರು ಬಣ್ಣದ ಧ್ವಜವನ್ನು ಕಿತ್ತುಹಾಕಿ, ಅದರ ಜಾಗದಲ್ಲಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆಂದು  ಪೊಲೀಸ್ ಆಧೀಕ್ಷಕ ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ ಬಗ್ಗೆ ಸ್ಥಳೀಯ ನಿವಾಸಿಗಳು ದೂರಿನ ಮೇರೆಗೆ ಅಂಕಿತ್ ಕಥೇರಿಯಾ, ರೋಹಿತ್ ಜೋಶಿ ಹಾಗೂ ರೋಹಿತ್ ಸಕ್ಸೇನಾ ಅವರನ್ನು ಮಂಗಳವಾರ ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆಎಂದು ಮೀನಾ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News