ಉತ್ತರಾಖಂಡ ಸರೋವರದಲ್ಲಿ 2 ಐಎಎಫ್ ಸಿಬ್ಬಂದಿ ಮುಳುಗಿ ಮೃತ್ಯು
Update: 2025-07-04 20:09 IST
PC ; PTI
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇಬ್ಬರು ಭಾರತೀಯ ವಾಯುಪಡೆ ಸಿಬ್ಬಂದಿ ಭೀಮ್ ತಲ್ ನಲ್ಲಿ ತುಂಬಿ ತುಳುಕುತ್ತಿರುವ ಸರೋವರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮೃತ ಭಾರತೀಯ ವಾಯು ಪಡೆ ಸಿಬ್ಬಂದಿಯನ್ನು ಪಂಜಾಬ್‌ನ ಪಠಾಣ್‌ಕೋಟ್‌ನ ಪ್ರಿನ್ಸ್ ಯಾದವ್ ಮತ್ತು ಬಿಹಾರದ ಮುಝಫ್ಫರ್ ಪುರದ ಸಾಹಿಲ್ ಕುಮಾರ್ ಎಂಬುದಾಗಿ ಗುರುತಿಸಲಾಗಿದೆ. ಅವರು ನೈನಿತಾಲ್‌ಗೆ ಪ್ರವಾಸ ಬಂದಿದ್ದ ನಾಲ್ವರು ಮಹಿಳೆಯರನ್ನು ಒಳಗೊಂಡ ಎಂಟು ಮಂದಿ ಭಾರತೀಯ ವಾಯುಪಡೆ ಸಿಬ್ಬಂದಿಯ ಗುಂಪಿನ ಭಾಗವಾಗಿದ್ದರು ಎಂದು ಸರ್ಕಲ್ ಆಫಿಸರ್ ಪ್ರಮೋದ್ ಶಾ ಹೇಳಿದ್ದಾರೆ.
ಸ್ಥಳೀಯರು ಸುಮಾರು ಒಂದು ಗಂಟೆ ಕಾಲ ಶ್ರಮಿಸಿದ ಬಳಿಕ ಮೃತದೇಹಗಳನ್ನು ಸರೋವರದಿಂದ ಮೇಲಕ್ಕೆತ್ತಿದರು.