×
Ad

ಉತ್ತರಾಖಂಡ: ಎಂಡಿಎಂಎ ಉತ್ಪಾದನಾ ಘಟಕ ಪತ್ತೆ; ಓರ್ವನ ಬಂಧನ

Update: 2025-07-16 20:38 IST

ಸಾಂದರ್ಭಿಕ ಚಿತ್ರ

ಡೆಹ್ರಾಡೂನ್: ಉತ್ತರಾಖಂಡದ ನಾನಕಮ್ತಾದಲ್ಲಿ ಮಾದಕ ದ್ರವ್ಯ ಉತ್ಪಾದಿಸುವ ಘಟಕವೊಂದನ್ನು ಪತ್ತೆ ಹಚ್ಚಲಾಗಿದ್ದು, ಅದರ ನಿರ್ವಾಹಕನೆಂದು ಹೇಳಲಾದ ಕುನಾಲ್ ರಾಮ್ ಕೊಹ್ಲಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಾಖಂಡ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್) ಹಾಗೂ ಉಧಮ್ ಸಿಂಗ್ ನಗರ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ಸಂದರ್ಭ ಎಂಡಿಎಂಎ ಉತ್ಪಾದಿಸಲು ಬಳಸಲಾಗುವ ಕಚ್ಛಾ ವಸ್ತುಗಳು ಗಣನೀಯ ಪ್ರಮಾಣದಲ್ಲಿ ಪತ್ತೆಯಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘‘ನಾವು 126 ಲೀಟರ್ ನಿಷೇಧಿತ ರಾಸಾಯನಿಕ ಹಾಗೂ 28 ಕಿ.ಗ್ರಾಂ. ಹುಡಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ. ಇದು ಸರಿಸುಮಾರು 12 ಕಿ.ಗ್ರಾಂ. ಎಂಡಿಎಂ ಉತ್ಪಾದಿಸಲು ಸಾಕಾಗುತ್ತದೆ. ಇದಲ್ಲದೆ 7.41 ಗ್ರಾಂ ಎಂಡಿಎಂಎಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಇದು ಇದುವರೆಗೆ ಈ ವಲಯದಲ್ಲಿ ವಶಪಡಿಸಿಕೊಳ್ಳಲಾದ ಅತಿ ದೊಡ್ಡ ಪ್ರಮಾಣದ ಮಾದಕ ದ್ರವ್ಯ’’ ಎಂದು ಉಧಮ್ ಸಿಂಗ್ ನಗರದ ಪೊಲೀಸ್ ವರಿಷ್ಠ ಮಣಿಕಂಠ ಮಿಶ್ರಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News