×
Ad

ಉತ್ತರಾಖಂಡ ಮೇಘ ಸ್ಫೋಟ : ನೆರೆ ಸಂತ್ರಸ್ತ ಪ್ರದೇಶಗಳಿಂದ 409 ಮಂದಿಯ ರಕ್ಷಣೆ

Update: 2025-08-07 20:48 IST

Photo : PTI

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಮೇಘ ಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿದ ಹಲವರನ್ನು ರಕ್ಷಿಸಿ ಹರಸಿಲ್‌ಗೆ ಕರೆದುಕೊಂಡು ಬರಲಾಗಿದೆ. ಇದರೊಂದಿಗೆ ರಕ್ಷಿಸಲಾದ ಜನರ ಒಟ್ಟು ಸಂಖ್ಯೆ 409ಕ್ಕೆ ತಲುಪಿದೆ ಎಂದು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಅಧಿಕಾರಿಗಳು ಗುರುವಾರ ದೃಢಪಡಿಸಿದ್ದಾರೆ.

ಉತ್ತರಾಖಂಡದ ಉತ್ತರಕಾಶಿ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದು ವ್ಯಾಪಕ ಹಾನಿ ಸಂಭವಿಸಿದ ಎರಡು ದಿನಗಳ ಬಳಿಕ ಪರಿಹಾರ ಕಾರ್ಯಗಳು ಸಮರೋಪಾದಿಯಾಗಿ ಸಾಗುತ್ತಿವೆ. ಈ ಪ್ರದೇಶದಲ್ಲಿ ಸಿಲುಕಿಕೊಂಡ ಹಲವರನ್ನು ಏರ್‌ಲಿಫ್ಟ್‌ ಮಾಡಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ. ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಗಂಗೋತ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ರಕ್ಷಿಸಿ ಹರಸಿಲ್‌ಗೆ ಕರೆ ತರಲಾದ ಜನರು ಸುರಕ್ಷಿತರಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಗುಜರಾತ್ 131, ಮಹಾರಾಷ್ಟ್ರದ 123, ಮಧ್ಯಪ್ರದೇಶದ 21, ಉತ್ತರಪ್ರದೇಶದ 12, ರಾಜಸ್ಥಾನದ 6, ದಿಲ್ಲಿಯ 7, ಅಸ್ಸಾಂ ಮತ್ತು ಕರ್ನಾಟಕದ ತಲಾ ಐವರು, ತೆಲಂಗಾಣದ ಮೂವರು ಹಾಗೂ ಪಂಜಾಬ್‌ನ ಓರ್ವರನ್ನು ರಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News