×
Ad

‘ವಿಲ್ಲೊಕೊಮೆನ್’, ‘ಸ್ವಾಗತಂ’, ‘ ಸೆಲಾಮತ್ ಡೆಟಾಂಗ್’ ; ಜಿ20 ಶೃಂಗಸಭೆಯ ಪ್ರತಿನಿಧಿಗಳಿಗೆ ಬಹುಭಾಷೆಗಳಲ್ಲಿ ಸ್ವಾಗತ

'Villokomen', 'Swagatham', 'Selamat Detang' ; Multilingual welcome to G20 Summit delegates

Update: 2023-09-08 23:33 IST

Photo: PTI 

ಹೊಸದಿಲ್ಲಿ: ಜಿ20 ಶೃಂಗಸಭೆಗೆ ಆಗಮಿಸುವ ಪ್ರತಿನಿಧಿಗಳು ಹಾಗೂ ಅಂತಾರಾಷ್ಟ್ರೀಯ ಅತಿಥಿಗಳನ್ನು ಇಲ್ಲಿನ ಶೃಂಗಸಭಾ ಸ್ಥಳದಲ್ಲಿರುವ ಪ್ರತಿನಿಧಿಗಳ ಕೇಂದ್ರದಲ್ಲಿ ಫ್ರೆಂಚ್ನ ‘ಬೈಯೆನ್ವೆನ್ಯೂ’ನಿಂದ ಹಿಡಿದು ಟರ್ಕಿ ಭಾಷೆಯ ‘ಹೊಸ್ಗೆಲ್ಡಿನಿಝ್’ ವರೆಗೆ ವಿವಿಧ ಜಾಗತಿಕ ಭಾಷೆಗಳಲ್ಲಿ ಸ್ವಾಗತಿಸಲಾಗುವುದು.

ಜಿ20 ಶೃಂಗಸಭೆಯ ಘೋಷವಾಕ್ಯವಾದ ‘ವಸುಧೈವ ಕುಟುಂಬಕಂ’, ‘ಸ್ವಾಗತ’ ಪದಗಳನ್ನು ಎಲ್ಲಾ ಜಿ20 ರಾಷ್ಟ್ರಗಳ ಹಾಗೂ ಆಹ್ವಾನಿತ ದೇಶಗಳ ಭಾಷೆಯಲ್ಲಿ ಮುದ್ರಿಸಲಾಗಿದೆ. ಜರ್ಮನ್ ಭಾಷೆಯ ವಿಲ್ಲೊಕೊಮಿನ್ನಿಂದ ಹಿಡಿದು ಇಂಡೊನೇಶ್ಯದ ‘ಸೆಲಾಮತ್ ದತಾಂಗ್’ ಹಾಗೂ ಸ್ಪಾನಿಶ್ ಭಾಷೆಯ ‘ಬಿಯೆನ್ವೆನಿಡೊ’ ಪದಗಳು ಭಾರತ ಮಂಡಪಂ ಸಂಕೀರ್ಣದ ಹಾಲ್ ನಂ.14ನಲ್ಲಿ ಸ್ಥಾಪಿಸಲಾದ ಸ್ವಾಗತ ಫಲಕದಲ್ಲಿ ರಾರಾಜಿಸುತ್ತಿವೆ.

ಜಿ20 ಶೃಂಗಸಭೆಗೆ ದೊಡ್ಡ ಸಂಖ್ಯೆಯ ಮಾಧ್ಯಮ ಪ್ರತಿನಿಧಿಗಳು ಆಗಮಿಸಿದ್ದು, ಶುಕ್ರವಾರ ಸಂಜೆ ಸಂಕೀರ್ಣದ ಹಾಲ್ ಸಂ. 3ರಲ್ಲಿ ಅಂತಾರಾಷ್ಟ್ರೀಯ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News